ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ರಾಜಧಾನಿ ಬೆಂಗಳೂರಿಗರಿಗೆ ಸಮಾಧಾನಕಾರಿ ಸುದ್ದಿ. ನಾಳೆಯಿಂದ ಬಹು ನಿರೀಕ್ಷಿತ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ನಡುವಿನ ಹಾಗೂ ಕೆಂಗೇರಿ ಮತ್ತು ಚಲಘಟ್ಟ ನಡುವೆ ಮೆಟ್ರೋ ರೈಲು ಓಡಾಟ ಆರಂಭ ಆಗಲಿದೆ. (#NammaMetro #PurpleLineOperarions)
ನಾಳೆ ಅಂದರೆ ಅಕ್ಟೋಬರ್ 9ರಂದು ಬೆಳಗ್ಗೆ 5 ಗಂಟೆಯಿಂದ ಈ ಎರಡೂ ಮಾರ್ಗದಲ್ಲಿ (ನೇರಳೆ ಮಾರ್ಗದಲ್ಲಿ) ಮೆಟ್ರೋ ಸಂಚಾರ ಆರಂಭವಾಗಲಿದೆ. ವೈಟ್ಫೀಲ್ಡ್ನಿಂದ ಪ್ರತಿ ದಿನ ಕೊನೆಯ ಮೆಟ್ರೋ ರೈಲು ರಾತ್ರಿ 10.45ಕ್ಕೆ ನಿರ್ಗಮಿಸಲಿದೆ.
ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ನಡುವೆ 2.1 ಕಿಲೋ ಮಾರ್ಗ ಮತ್ತು ಕೆಂಗೇರಿ ಮತ್ತು ಚಲಘಟ್ಟ ನಡುವೆ 2.05 ಕಿಲೋ ಮೀಟರ್ ಮೆಟ್ರೋ ರೈಲು ಮಾರ್ಗ ನಾಳೆಯಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಈ ಮಾರ್ಗಗಳಲ್ಲೂ ಮೆಟ್ರೋ ಓಡಾಟ ಶುರುವಾಗುವುದರೊಂದಿಗೆ ನೇರಳೆ ಮಾರ್ಗ ಉದ್ದ 43.49 ಕಿಲೋ ಮೀಟರ್ಗೆ ಹೆಚ್ಚಳವಾಗಿದೆ. ವೈಟ್ಫೀಲ್ಡ್ (ಕಾಡುಗೋಡಿ)ಯಿಂದ ಚಲಘಟ್ಟ ಸಂಪರ್ಕಿಸುವ ಈ ಮಾರ್ಗದಲ್ಲಿ 37 ಮೆಟ್ರೋ ನಿಲ್ದಾಣಗಳಿವೆ.
ಇದರೊಂದಿಗೆ ನಮ್ಮ ಮೆಟ್ರೋ ಸಂಪರ್ಕ ರಾಜಧಾನಿಯಲ್ಲಿ ಒಟ್ಟು 73.81 ಕಿಲೋ ಮೀಟರ್ಗೆ ಏರಿಕೆ ಆಗಿದೆ.
ವೈಟ್ಫೀಲ್ಡ್ನಿಂದ ಪಟ್ಟಂದೂರು ಅಗ್ರಹಾರ ನಿಲ್ದಾಣಕ್ಕೆ 3 ನಿಮಿಷ, ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ 3 ನಿಮಿಷ, ಮೆಜೆಸ್ಟಿಕ್ನಿಂದ ಎಂಜಿ ರೋಡ್ ನಿಲ್ದಾಣಕ್ಕೆ 3 ನಿಮಿಷ ಮತ್ತು ಮೈಸೂರು ರಸ್ತೆಯಿಂದ ಚಲಘಟ್ಟಕ್ಕೆ 10 ನಿಮಿಷ ಬೇಕಾಗುತ್ತದೆ,
ADVERTISEMENT
ADVERTISEMENT