ADVERTISEMENT
ಭಾನುವಾರ ಜೂನ್ 16ರಂದು ನಮ್ಮ ಮೆಟ್ರೋ ರೈಲುಗಳು ಬೆಳಗ್ಗೆ 7 ಗಂಟೆಯ ಬದಲು 6 ಗಂಟೆಗೆ ಸಂಚಾರ ಆರಂಭಿಸಲಿವೆ.
ಜೂನ್ 16ರಂದು ಯುಪಿಎಸ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ಗಂಟೆ ಮುಂಚಿತವಾಗಿಯೇ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲು ನಮ್ಮ ಮೆಟ್ರೋ ತೀರ್ಮಾನಿಸಿದೆ.
ಎಲ್ಲ ಟರ್ಮಿನಲ್ ನಿಲ್ದಾಣಗಳಾದ ವೈಟ್ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ನಾಗಸಂದ್ರ, ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ನಮ್ಮ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 7 ಗಂಟೆಯ ಬದಲು 6 ಗಂಟೆಗೆ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ADVERTISEMENT