ಗುಜರಾತ್ನ ಅಹ್ಮದಾಬಾದ್ನ ಮಣಿನಗರ್ ಮುನ್ಸಿಪಲ್ ಕಾರ್ಪೋರೇಷನ್ ಎಎಮ್ಸಿ ಎಮ್ಇಟಿ ಮೆಡಿಕಲ್ ಕಾಲೇಜಿಗೆ ನರೇಂದ್ರ ಮೋದಿ ಮೆಡಿಕಲ್ ಕಾಲೇಜು (Narendra Modi Medical College) ಎಂದು ಹೆಸರು ಬದಲಾಯಿಸಿದೆ.
ಮಣಿನಗರದ ಅಮ್ದವದ್ ಮುನ್ಸಿಪಲ್ ಕಾರ್ಪೋರೇಷನ್ ಇಂದು ನಡೆಸಿದ ಕಮಿಟಿ ಸಭೆಯಲ್ಲಿ ಎಎಮ್ಸಿ ಕಾಲೇಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi Medical College) ಹೆಸರು ಮರುನಾಮಕರಣ ಮಾಡಲು ತೀರ್ಮಾನಿಸಿದೆ.
ಮಣಿನಗರದ ಎಲ್ಜಿ ಆಸ್ಪತ್ರೆಯ ಆವರಣದಲ್ಲಿ ಎಎಮ್ಸಿ ಮೆಡಿಕಲ್ ಎಜ್ಯುಕೇಷನ್ ಟ್ರಸ್ಟ್ ಈ ಕಾಲೇಜನಲ್ಲಿ ನಡೆಸುತ್ತಿದೆ. ಈ ಕಾಲೇಜಿನಲ್ಲಿ ಎಮ್ಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ಗಳನ್ನು ಕಲಿಸಲಾಗುತ್ತದೆ.
ಗುಜರಾತ್ನ ಸಿಎಂ ಆಗಿ ಇದೀಗ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಹೆಸರನ್ನು ಅಜರಾಮರವಾಗಿಸಲು ಸೆ.17 ರಂದು ಅವರ ಹುಟ್ಟುಹಬ್ಬದಂದೇ ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಎಎಮ್ಸಿ ಹೇಳಿದೆ.
ಈ ಹಿಂದೆ ಫೆಬ್ರವರಿ 21, 2021 ರಂದು ಗುಜರಾತ್ನ ಅಹ್ಮದಬಾದ್ನ ಸರ್ದಾರ್ ವಲ್ಲಭಾಯ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು. ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ 10 ಲಕ್ಷ ಹುದ್ದೆಗಳ ನೇಮಕಾತಿ – ಪ್ರಧಾನಿ ನರೇಂದ್ರ ಮೋದಿ ಸೂಚನೆ