68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. ತಮಿಳು ನಟ ಸೂರ್ಯ ಹಾಗೂ ಹಿಂದಿ ನಟ ಅಜಯ್ ದೇವಗನ್ ಅವರು ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಸೂರ್ಯ ಅವರ ಸೂರರೈ ಪೊಟ್ರುಟು ಸಿನೆಮಾ ಹಾಗೂ ಅಜಯ್ ದೇವಗನ್ ಅವರ ತಾನಾಜಿ: ದ ಅನ್ಸಂಗ್ ವಾರಿಯರ್ ಎಂಬ ಚಿತ್ರದಲ್ಲಿನ ನಟನೆಗೆ ಈ ಇಬ್ಬರೂ ನಟರು ಜಂಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಸೂರ್ಯ ನಟನೆಯ ಸೂರರೈ ಪೊಟ್ರುಡು ಸಿನೆಮಾ ಕ್ಯಾ.ಗೋಪಿನಾಥ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿನ ನಟನೆಗೆ ಅಪರ್ಣಾ ಬಾಲಮುರುಳಿ ಅವರ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ. ಅಲ್ಲದೇ, ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನೂ ಗಳಿಸಿಕೊಂಡಿದೆ.
ಅಜಯ್ ದೇವಗನ್ ನಟನೆಯ ತಾನಾಜಿ: ದ ಅನ್ಸಂಗ್ ವಾರಿಯರ್ ಚಿತ್ರ ಜನಪ್ರಿಯ ಮರಾಠ ಯೋಧ ತಾನಾಜಿ ಮಾಲಸೋರೆ ಅವರ ಕುರಿತಾಗಿದೆ. ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಎಂಬ ಪ್ರಶಸ್ತಿಯೂ ಸಂದಿದೆ.