ಕೋಟ್ಯಧಿಪತಿ ಗೌತಮ್ ಅದಾನಿಯ ವಾಣಿಜ್ಯ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ಆ ಆಸ್ತಿಗಳನ್ನು ಹರಾಜು ಹಾಕಿ
ಹೀಗೆಂದು ಮಾಜಿ ರಾಜ್ಯಸಭಾ ಸಂಸದರೂ ಆಗಿರುವ ಸುಬ್ರಹ್ಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಹಿಂಡನ್ಬರ್ಗ್ ಸಂಶೋಧನ ವರದಿ ಬಳಿಕ ಅದಾನಿ ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿವೆ. ಷೇರು ಕುಸಿತದ ನಡುವೆಯೂ ಕೈಗೊಂಡಿದ್ದ ಎಫ್ಪಿಒ ವಹಿವಾಟನ್ನು ವಹಿವಾಟು ನಡೆದ ಒಂದು ದಿನದಲ್ಲೇ ಅದಾನಿ ಕಂಪನಿ ರದ್ದುಗೊಳಿಸಿದೆ.
2 ಲಕ್ಷ ಕೋಟಿ ರೂಪಾಯಿ ಸಾಲ ಹೊಂದಿರುವ ಅದಾನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 21 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಅದಾನಿ ಕಂಪನಿಯಲ್ಲಿ ಎಲ್ಐಸಿಯೂ ಹೂಡಿಕೆ ಮಾಡಿದ್ದು ಅದಾನಿ ಕಾರಣದಿಂದ ಎಲ್ಐಸಿ ಷೇರುಗಳೂ ನಷ್ಟ ಅನುಭವಿಸಿವೆ.