ಖ್ಯಾತ ನಟಿ ನಯನತಾರಾ(37) ಹಾಗೂ ನಿರ್ಮಾಪಕ ವಿಜ್ನೇಶ್ ಶಿವನ್(36) ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಬ್ಬರ ಮದುವೆ ಸಮಾರಂಭಕ್ಕೆ ಖ್ಯಾತನಾಮರಾದ ರಜನೀಕಾಂತ್, ಶಾರುಖ್ಖಾನ್, ಅಟ್ಲೀ, ಕಾರ್ತಿ, ಶರತ್ಕುಮಾರ್, ವಿಜಯ್ ಸೇತುಪತಿ, ಮಣಿರತ್ನಂ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಈ ಮೊದಲು ತಿರುಪತಿಯಲ್ಲಿ ಮದುವೆ ಸಮಾರಂಭ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮಹಾಬಲಿಪುರಂನಲ್ಲಿ ಇಂದು ಮದುವೆ ಸಮಾರಂಭ ನಡೆದಿದೆ. ಈ ಮೊದಲೇ ವಿಜ್ಞೇಶ್ ಶಿವನ್ ತಿಳಿಸಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಮಧ್ಯೆ ಮದುವೆ ಸಮಾರಂಭ ಅದ್ದೂರಿಯಾಗಿ ನಡೆದಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಜ್ಞೇಶ್ ಶಿವನ್ ಅವರು ಮದುವೆ ಸಮಾರಂಭದ ಮೊದಲ ಪೋಟೋ ಹಂಚಿಕೊಂಡಿದ್ದಾರೆ.
2015 ರಲ್ಲಿ ವಿಜ್ಞೇಶ್ ಶಿವನ್ ಅವರು ನಯನತಾರಾ ಅವರ ನಾನುಂ ರೌಡಿ ದಾನ್ ಚಿತ್ರದ ನಿರ್ದೇಶನ ಮಾಡಿದ್ದರು. ಈ ಚಿತ್ರದ ಚಿತ್ರೀಕರಣದಲ್ಲಿ ಇಬ್ಬರು ಪ್ರೀತಿಯ ಬಲೆಗೊಳಗೆ ಅಡಿಯಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು.
ಈ ಮೊದಲು ನಯನತಾರಾ ಹಾಗೂ ಡ್ಯಾನ್ಸ್ ಮಾಸ್ಟರ್ ಪ್ರಭುದೇವ್ ಅವರು ರಿಲೇಷನ್ಶಿಪ್ನಲ್ಲಿದ್ದರು. ಆದರೆ, ಇಬ್ಬರು ನಡುವೆ ಮನಸ್ತಾಪ ಉಂಟಾದ ಕಾರಣ ಮದುವೆ ಮುರಿದುಬಿದ್ದಿತ್ತು.