ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಂಪತಿಗೆ ಅವಳಿ ಮಕ್ಕಳ ಭಾಗ್ಯ.
ನಟಿ ನಯನತಾರಾ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ವಿಘ್ನೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇಬ್ಬರು ಮಕ್ಕಳಿಗೆ ಹೆಸರನ್ನೂ ಇಡಲಾಗಿದೆ. ಉಯಿರ್ (ಜೀವನ) ಮತ್ತು ಉಳಗಂ (ಜಗತ್ತು) ಎಂದು ಅವಳಿ ಗಂಡು ಮಕ್ಕಳಿಗೆ ನಾಮಕರಣ ಮಾಡಲಾಗಿದೆ.
ಕಂದಮ್ಮಗಳ ಪಾದಕ್ಕೆ ತಾಯಿ ನಯನತಾರಾ ಮತ್ತು ತಾವು ಮುತ್ತುಕೊಡುತ್ತಿರುವ ಫೋಟೋವನ್ನು ವಿಘ್ನೇಶ್ ಹಂಚಿಕೊಂಡಿದ್ದಾರೆ.
