ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy – NDA) ಮತ್ತು ನೌಕಾ ಅಕಾಡೆಮಿ ಸೇರಬೇಕು ಎಂಬುದು ಅನೇಕ ಯುವ ಜನತೆಯ ಕನಸಾಗಿದೆ. ಇದೀಗ ಈ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಯುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ, ಹುದ್ದೆ ವಿವರ, ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಕೇಂದ್ರ ಲೋಕ ಸೇವಾ ಆಯೋಗದಿಂದ 857 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆ ವಿವರ ಇಲ್ಲಿದೆ
- ಎನ್ಡಿಎ (ಸೇನೆ) – 208
- ಎನ್ಡಿಎ (ನೌಕಾ ಸೇನೆ) – 42
- ಎನ್ಡಿಎ (ವಾಯು ಸೇನೆ) (ಹಾರಾಟ) -18
- ಎನ್ಡಿಎ (ವಾಯು ಸೇನೆ) (ಗ್ರೌಂಡ್ ಡ್ಯೂಟಿ) -10
- ನೌಕಾ ಅಕಾಡೆಮಿ – 30
- ಭಾರತೀಯ ಸೇನಾ ಅಕಾಡೆಮಿ – 100
- ಭಾರತೀಯ ನೌಕಾ ಅಕಾಡೆಮಿ – 32
- ವಾಯು ಸೇನಾ ಅಕಾಡೆಮಿ – 32
- ಆಫೀಸರ್ ಟ್ರೈನಿಂಗ್ ಅಕಾಡೆಮಿ (ಪುರುಷ) – 275
- ಆಫೀಸರ್ ಟ್ರೈನಿಂಗ್ ಅಕಾಡೆಮಿ (ಮಹಿಳಾ) -18
ವಿದ್ಯಾರ್ಹತೆ:
ಎನ್ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನಾ ಅಕಾಡೆಮಿ ಹುದ್ದೆಗೆ ಪದವಿ, ಭಾರತೀಯ ನೌಕ ಅಕಾಡೆಮಿಗೆ ಇಂಜಿನಿಯರಿಂಗ್ ಪದವಿ, ವಾಯು ಸೇನಾ ಅಕಾಡೆಮಿಗೆ ಪದವಿ, ಇಂಜಿನಿಯರಿಂಗ್ ಪದವಿ, ಆಫೀಸರ್ ಟ್ರೈನಿಂಗ್ ಅಕಾಡೆಮಿಗೆ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ಜುಲೈ 2005ಕ್ಕಿಂತ ಮುಂಚೆ ಮತ್ತು 1 ಜುಲೈ 2008ಕ್ಕೆ ನಂತರ ಜನಿಸಿರಬಾರದು.
ಅರ್ಜಿ ಸಲ್ಲಿಕೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎನ್ಡಿಎ ಮತ್ತು ನೌಕಾ ಅಕಾಡಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರ್ತಿ ಮಾಡಬೇಕು.ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಪರೀಕ್ಷೆಗೆ ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಬೌದ್ಧಿ ಮತ್ತು ವ್ಯಕ್ತಿತ್ವ ಪರೀಕ್ಷೆ, ಪೈಲಟ್ ಆಪಟ್ಯೂಡ್ ಪರೀಕ್ಷೆ ಸಂದರ್ಶನ ಇರುತ್ತದೆ.
ಈ ಹುದ್ದೆಗೆ ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿಸಲ್ಲಿಕೆಗೆ ಕಡೆಯ ದಿನಾಂಕ ಜನವರಿ 9 ಆಗಿದೆ. ಅರ್ಜಿ ಪರಿಷ್ಕರಣೆಗೆ ಜನವರಿ 10 ರಿಂದ 16ರವರೆಗೆ ಅವಕಾಶ ಇದೆ. ಏಪ್ರಿಲ್ 21ರಂದು ಪರೀಕ್ಷೆ ನಡೆಯಲಿದೆ.
ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.