ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಎನ್ ಡಿಎ ಸರ್ಕಾರ ಎಂದರೆ ನೋ ಡೇಟಾ ಅವೇಲಬಲ್ (ಮಾಹಿತಿ ಲಭ್ಯವಿಲ್ಲದ ಸರ್ಕಾರ) ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಈ ಸರ್ಕಾರ ಯಾವುದೇ ಉತ್ತರವನ್ನೂ ನೀಡುವುದಿಲ್ಲ ಹಾಗೂ ಹೊಣೆಗಾರಿಕೆ ಇಲ್ಲದ ಸರ್ಕಾರವಾಗಿದೆ. ನೋ ಡೇಟಾ ಅವೇಲಬಲ್ (ಎನ್ ಡಿಎ) ಸರ್ಕಾರಕ್ಕೆ ನೀವು ಅದನ್ನು ನಂಬುವುದಷ್ಟೇ ಬೇಕು. ಕೊರೋನಾ ಅವಧಿಯಲ್ಲಿ ಯಾರೂ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿಲ್ಲ. ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಲಾಕ್ ಡೌನ್ ಅವಧಿಯಲ್ಲಿ ನಡೆದು ತಮ್ಮ ಊರಿಗೆ ಬರುತ್ತಿದ್ದಾಗ ವಲಸಿಗ ಕಾರ್ಮಿಕರು ಯಾರೂ ಸಾವನ್ನಪ್ಪಿಲ್ಲ. ಈ ಸರ್ಕಾರದ ಅವಧಿಯಲ್ಲಿ ಯಾರ ಮೇಲೆಯೂ ಗುಂಪು ಹಲ್ಲೆ ನಡೆದಿಲ್ಲ. ಯಾವುದೇ ಪತ್ರಕರ್ತರನ್ನೂ ಬಂಧಿಸಿಲ್ಲ ಎಂದು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಬರೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘No Data Available’ (NDA) govt wants you to believe:
• No one died of oxygen shortage
• No farmer died protesting
• No migrant died walking
• No one was mob lynched
• No journalist has been arrestedNo Data. No Answers. No Accountabilty. pic.twitter.com/mtbNkkBoXe
— Rahul Gandhi (@RahulGandhi) July 23, 2022
ಯಾವ ಅಂಕಿ-ಅಂಶಗಳೂ ಇಲ್ಲ. ಯಾವುದಕ್ಕೂ ಉತ್ತರವಿಲ್ಲ. ಯಾವುದಕ್ಕೂ ಹೊಣೆಗಾರಿಕೆ ಇಲ್ಲ ಎಂದು ಗಾಂಧಿ ಹೇಳಿದ್ದಾರೆ.
ತಮ್ಮ ಈ ಪೋಸ್ಟ್ ನೊಂದಿಗೆ “ಸಬ್ ಚಂಗಾ ಸಿ” ಎಂಬ ಗುಜರಾತಿ ಭಾಷೆಯ ಮೋದಿ ಹೇಳಿಕೆಯನ್ನು ವ್ಯಂಗ್ಯ ಮಾಡಲು “ಗಾಯಲ್ ಸಬ್ ಚಂಗ ಸಿ” ಜಿಐಎಫ್ ಫೈಲ್ ನ್ನೂ ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ.