ಗುಜರಾತ್ ಮೂಲದ ಗೌತಮ್ ಅದಾನಿ ಮಾಲೀಕತ್ವದ ಎನ್ಡಿಟಿವಿ ತನ್ನ ನೆಟ್ವರ್ಕ್ ವಿಸ್ತರಣೆಗೆ ತೀರ್ಮಾನಿಸಿದೆ.
ಭಾರತದ 9 ಭಾಷೆಗಳಲ್ಲಿ ಎನ್ಡಿಟಿವಿ ತನ್ನ ಚಾನೆಲ್ಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ.
ಮೇ 17ರಂದು ನಡೆದ ಎನ್ಡಿಟಿವಿ ನಿರ್ದೇಶಕರ ಮಂಡಳಿ ಸಭೆಯಲ್ಲಿ 9 ಚಾನೆಲ್ಗಳನ್ನು ಆರಂಭಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಕೇಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವಾಲಯದಿಂದ ಅನುಮತಿ ಸಿಕ್ಕ ಬಳಿಕ ಚಾನೆಲ್ಗಳನ್ನು ಯಾವ ದಿನದಿಂದ ಆರಂಭಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವುದಾಗಿ ಸೆಬಿ (ಭಾರತೀಯ ಷೇರು ನಿಯಂತ್ರಣ ಮಂಡಳಿ)ಗೆ ಸಲ್ಲಿಸಿದ ದಾಖಲೆಯಲ್ಲಿ ಎನ್ಡಿಟಿವಿ ಹೇಳಿದೆ.
ADVERTISEMENT
ADVERTISEMENT