ನಾಲ್ವರು ಭಾರತೀಯರನ್ನು ಒಳಗೊಂಡಂತೆ 22 ಜನರನ್ನು ಹೊತ್ಯೊಯ್ದಿದ್ದ ನೇಪಾಳದ ವಿಮಾನ ಸಂಪರ್ಕ ಕಡಿದುಕೊಂಡಿದೆ.
ನೇಪಾಳದ ತಾರಾ ಏರ್ಸ್ 9 NAET ಅವಳಿ-ಎಂಜಿನ್ ವಿಮಾನವು ಪೋಖರಾದಿಂದ ನೇಪಾಳದ ಜೋಮ್ಸೋಮ್ಗೆ ಹಾರುತ್ತಿತ್ತು. ಆದರೆ, ಇದೀಗ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಿಮಾನ ಸಂಪರ್ಕ ಕಡಿದುಕೊಂಡಿದೆ. ಸುಮಾರು ಬೆಳಗ್ಗೆ 9:55ಕ್ಕೆ ವಿಮಾನ ತನ್ನ ಸಂಪರ್ಕವನ್ನು ಕಳೆದುಕೊಂಡಿತು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನೀಯರು ಹಾಗೂ ಇನ್ನುಳಿದಂತೆ ನೇಪಾಳಿ ನಾಗರೀಕರು ಸೇರಿದಂತೆ 22 ಜನರಿದ್ದರು.
ವಿಮಾನವು ಮುಸ್ತಾಂಗ್ ಜಿಲ್ಲೆಯ ಜೋಮ್ಸಮ್ನ ಆಕಾಶದ ಮೇಲೆ ಕಾಣಿಸಿಕೊಂಡಿತು ಆಮೇಲೆ ಧೌಲಗಿರಿ ಪರ್ವತಕ್ಕೆ ತಿರುಗಿಸಲಾಯಿತು, ನಂತರ ಅದು ಸಂಪರ್ಕಕ್ಕೆ ಬರಲಿಲ್ಲ ಎಂದು ಮುಖ್ಯ ನೇಪಾಳದ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.