ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸುಮಾರು ಹತ್ತು ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ ಎಂದು ಪ್ರಕಟಿಸಿದೆ.
ಎರಡನೇ ತ್ರೈಮಾಸಿಕ ಗಳಿಕೆಯ ವರದಿಯಲ್ಲಿ, ಕಂಪನಿಯು 9,70,000 ಚಂದಾದಾರರನ್ನು ಕಳೆದುಕೊಂಡಿದೆ ಎಂದು ಬಹಿರಂಗಪಡಿಸಿದೆ. ಇದು ಮೊದಲ ತ್ರೈಮಾಸಿಕದಿಂದ 2,00,000 ಸದಸ್ಯರ ಕುಸಿತಕ್ಕಿಂತ ಬಹುತೇಕ ಐದು ಪಟ್ಟು ಹೆಚ್ಚಾಗಿದೆ.
ಎರಡನೇ ತ್ರೈಮಾಸಿಕವು ಸದಸ್ಯತ್ವದ ಬೆಳವಣಿಗೆಯಲ್ಲಿ ನಿರೀಕ್ಷೆಗಿಂತ ಉತ್ತಮವಾಗಿದೆ. ಮತ್ತು ವಿದೇಶಿ ವಿನಿಮಯವು ನಿರೀಕ್ಷಿತಕ್ಕಿಂತ ಕೆಟ್ಟದಾಗಿದೆ. ಇದರ ಪರಿಣಾಮವಾಗಿ ಕೇವಲ ಶೇಕಡಾ 9 ಆದಾಯದ ಬೆಳವಣಿಗೆ ಕಂಡಿದೆ ಎಂದು ಕಂಪನಿಯು ಹೇಳಿಕೆ ತಿಳಿಸಿದೆ.
ಕಳೆದ 25 ವರ್ಷಗಳಿಂದ ನಾವು ಮಾಡಿದಂತೆ ನಮ್ಮ ಉತ್ಪನ್ನ, ವಿಷಯ ಮತ್ತು ಮಾರ್ಕೆಟಿಂಗ್ ಅನ್ನು ಸುಧಾರಿಸುವುದನ್ನು ಮುಂದುವರಿಸುವ ಮೂಲಕ ನಮ್ಮ ಆದಾಯ ಮತ್ತು ಸದಸ್ಯತ್ವದ ಬೆಳವಣಿಗೆಯನ್ನು ವೇಗಗೊಳಿಸುವುದು ಎಂದು ನೆಟ್ಫ್ಲಿಕ್ಸ್ ಸಂಸ್ಥೆ ಹೇಳಿದೆ.
ನೆಟ್ಫ್ಲಿಕ್ಸ್ ಅಮೆರಿಕ ಮತ್ತು ಕೆನಡಾದಲ್ಲಿ 7.328 ಕೋಟಿ ಪಾವತಿಸಿದ ಚಂದಾದಾರರನ್ನು ಹೊಂದಿದೆ ಮತ್ತು ವಿಶ್ವದಾದ್ಯಂತ 22.067 ಕೋಟಿ ಮತ್ತು ಚಂದಾದಾರರನ್ನು ಹೊಂದಿದೆ. ಮೂರನೇ ತ್ರೈಮಾಸಿಕದಲ್ಲಿ ಒಂದು ಮಿಲಿಯನ್ ಚಂದಾದಾರರನ್ನು ಒಳಗೊಳ್ಳುವ ನಿರೀಕ್ಷೆ ಎಂದು ನೆಟ್ಫ್ಲಿಕ್ಸ್ ಹೇಳಿದೆ.
ನೆಟ್ಫ್ಲಿಕ್ಸ್ ಪ್ರಕಾರ, ಆದಾಯವು 2021 ರಲ್ಲಿ 7.3 ಶತಕೋಟಿ ಡಾಲರ್ದನಿಂದ ಈ ತ್ರೈಮಾಸಿಕದಲ್ಲಿ 7.97 ಶತಕೋಟಿ ಡಾಲರ್ಗೆ ಶೇಕಡಾ 9 ರಷ್ಟು ಹೆಚ್ಚಾಗಿದೆ.
ಏಪ್ರಿಲ್ನಲ್ಲಿ, ಪ್ಲಾಟ್ಫಾರ್ಮ್ 2022 ರ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ ಪಾವತಿಸಿದ ಚಂದಾದಾರರನ್ನು ಕಳೆದುಕೊಂಡಿರುವುದಾಗಿ ಹೇಳಿತ್ತು. ಒಂದು ದಶಕದಲ್ಲಿ ಅದರ ಮೊದಲ ಚಂದಾದಾರರ ನಷ್ಟವಾಗಿದೆ.
ಇದಲ್ಲದೆ, ನೆಟ್ಫ್ಲಿಕ್ಸ್ 2022 ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಪಾವತಿಸಿದ ಚಂದಾದಾರರ 20 ಲಕ್ಷ ನಷ್ಟವನ್ನು ಮುನ್ಸೂಚಿಸಿತ್ತು, ಆದರೆ ಆದಾಗ್ಯೂ, ಅದು ಅರ್ಧದಷ್ಟು ಮಾತ್ರ ಕಳೆದುಕೊಂಡಿದೆ.