ಬೆಂಗಳೂರು: ಚೀನಾದಲ್ಲಿ ನ್ಯುಮೊನಿಯಾ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಸೋಂಕು ಹರಡಿದ್ದು, ಜನರು ಭಯಭೀತರಾಗಿದ್ದರು.
ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ನ್ಯುಮೊನಿಯಾ ಭೀತಿ ಹರಡಿದೆ. ಇದರಿಂದಾಗಿ ಜನರಿಗೆ ಆತಂಕ ಎದುರಾಗಿದೆ.ಕಳೆದ ಒಂದು ವಾರದಿಂದ ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಗಿ ನ್ಯುಮೊನಿಯಾ ಕಂಡುಬಂದಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಆಸ್ಪತ್ರೆಯಲ್ಲಿ ದಿನಕ್ಕೆ ತುಂಬಾ ನ್ಯೂಮೊನಿಯಾ ಕೇಸ್ ಗಳು ದಾಖಲಾಗುತ್ತಿದೆ. ಈವೆರೆಗೆ ಬೆಂಗಳೂರಿನಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೊನಿಯಾ ವೈರೆಸ್ ಪತ್ತೆಯಾಗಿದ್ದು , ಉಸಿರಾಟದಿಂದ ಬಳಲುತ್ತಿದ್ದಾರೆ.
ನಗರದ ಮಲ್ಲೇಶ್ವರಂ ಹಾಗೂ ಜಯನಗರ ಸೇರಿದಂತೆ ಅನೇಕ ಆಸ್ಪತ್ರೆಯಲ್ಲಿ ಸುಮಾರು 25% ರಿಂದ 30% ಕೇಸ್ ಗಳು ಪತ್ತೆಯಾಗಿದೆ.