ಕನ್ನಡ ಕಡ್ಡಾಯಕ್ಕಾಗಿ ಒಂದು ಹೊಸ ಕಾನೂನನ್ನೇ ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ (CM Basavaraj Bommai) ತಿಳಿಸಿದರು.
ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಅವರು. ನಾನು ಕನ್ನಡ ಪರ ಇದ್ದೇನೆ. ಕನ್ನಡ ಉಳಿವು ಬೆಳವಿಗೆ ಸರ್ಕಾರ ಬದ್ದವಾಗಿದೆ. ಇದರಲ್ಲಿ ಯಾವ ಕಾರಣಕ್ಕೂ ರಾಜಿಯೇ ಇಲ್ಲ. ನೆಲ ಜಲ ಭಾಷೆ ವಿಷಯದಲ್ಲಿ ರಾಜಕೀಯ ಮೀರಿ ನಿರ್ಧಾರ ಮಾಡುತ್ತೇವೆ, ಕರ್ನಾಟಕದಲ್ಲಿ ಕನ್ನಡ ಅಗ್ರಮಾನ್ಯ ಭಾಷೆ ಆಗಿದ ಎಂದು ಹೇಳಿದರು.
ಕನ್ನಡವನ್ನು ಹೆಚ್ಚು ಬಳಸಲು ಒಂದು ಪ್ರತ್ಯೇಕ ಕಾನೂನು ತರುತ್ತಿದ್ದೇವೆ. ಕನ್ನಡವನ್ನು ನಾವು ಖಂಡಿತವಾಗಿ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ : ಹಿಂದಿ ಹೇರಿಕೆ ವಿರೋಧಿಸಿ ಇಂದು ಕರವೇ ಪ್ರತಿಭಟನೆ