ಆಯಿಲ್ ಕಂಪೆನಿಗಳು ಹೊಸ ಗ್ಯಾಸ್ ಕನೆಕ್ಷನ್ ಬೆಲೆ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ.
ಹೊಸ ಸಿಲಿಂಡರ್ ಸಂಪರ್ಕ ಪಡೆಯಲು ಠೇವಣಿ ಇಡುವ ಹಣವನ್ನು ಜೂನ್ 16 ರಂದು 750 ರೂ.ಗಳಿಗೆ ಹೆಚ್ಚಳ ಮಾಡಿ ಆಯಿಲ್ ಸಂಸ್ಥೆಗಳು ಆದೇಶ ಹೊರಡಿಸಿವೆ. ಇದೀಗ, ಒಂದು ಹೊಸ ಗ್ಯಾಸ್ ಪಡೆಯಲು 2,200 ರೂ.ಗಳನ್ನು ಠೇವಣಿ ಇಡಬೇಕಾಗಿದೆ.
ಈ ಮೊದಲು ಹೊಸ ಸಿಲಿಂಡರ್ ಕನೆಕ್ಷನ್ ಪಡೆಯಲು 1450 ರೂ.ಗಳನ್ನು ಠೇವಣಿ ಇಡಬೇಕಿತ್ತು. 2 ಸಿಲಿಂಡರ್ ಸಂಪರ್ಕ ಪಡೆಯಬೇಕಾದರೆ ಇದೀಗ 4,400 ರೂ. ಠೇವಣಿ ಇಡಬೇಕಿದೆ. ಆ ಮೂಲಕ 14.2 ಕೆಜಿಯ 2 ಸಿಲಿಂಡರ್ ಸಂಪರ್ಕ ಪಡೆಯಲು ಹೆಚ್ಚುವರಿಯಾಗಿ 1,500 ರೂ.ಗಳನ್ನು ಠೇವಣಿ ಇಡಬೇಕಿದೆ.
ಕೇವಲ ಠೇವಣಿ ಹೆಚ್ಚಳ ಮಾತ್ರವಲ್ಲದೇ, ಗ್ಯಾಸ್ ರೆಗ್ಯೂಲೇಟರ್ ಬೆಲೆಯನ್ನು100 ರೂ. ಹೆಚ್ಚಳ ಮಾಡಿದೆ. ಈ ಮೊದಲು 150 ರೂ.ಗಳಿದ್ದ ಬೆಲೆ 250 ರೂ.ಗಳಿಗೆ ಹೆಚ್ಚಳವಾಗಿದೆ.
5 ಕೆಜಿ ಬೆಲೆಯ ಸಿಲಿಂಡರ್ ಠೇವಣಿಯನ್ನು 250 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು 800 ರೂ.ಗಳಿದ್ದ ಬೆಲೆ ಈಗ 1150 ರೂ.ಗಳಿಗೆ ಹೆಚ್ಚಳವಾಗಿದೆ. ಹಾಗೆಯೇ, ಗ್ಯಾಸ್ ಪೈಪ್ ಹಾಗೂ ಪಾಸ್ಬುಕ್ ಪುಸ್ತಕಕ್ಕಾಗಿ, 150 ರೂ ಮತ್ತು 25 ರೂಗಳನ್ನು ನೀಡಬೇಕಿದೆ.
2019 ಜೂನ್ ಗಿಂತ 2022 ರಲ್ಲಿ 28.1 ರಷ್ಟು ಎಲ್ಪಿಜಿ ಬಳಕೆದಾರರ ಪ್ರಮಾಣ ಹೆಚ್ಚಳವಾಗಿದೆ.