ADVERTISEMENT
ಭಾರತದ ಹೊಸ ಸಂಸತ್ ಭವನದ ಲೋಕಾರ್ಪಣೆ ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿದ್ದಾರೆ.
ಪ್ರಧಾನಿ ಅವರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಜೊತೆಯಾಗಿದ್ದರು.
ಹೊಸ ಸಂಸತ್ ಭವನದಲ್ಲಿ ಸ್ಪೀಕರ್ ಪೀಠದ ಪಕ್ಕದಲ್ಲಿ ರಾಜದಂಡವನ್ನು ಪ್ರತಿಷ್ಠಾಪಿಸಿದ ಬಳಿಕ ಸಂಸತ್ ಭವನದ ಉದ್ಘಾಟನೆ ನಡೆಯಿತು.
ತಮಿಳುನಾಡಿನ ತಿರುವಾವದುತ್ತುರೈ ಆಧೀನಮ್ನ ಸ್ವಾಮೀಜಿಗಳು ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರಿಗೆ ಈ ರಾಜದಂಡವನ್ನು ಹಸ್ತಾಂತರ ಮಾಡಿದ್ದರು.
ಬೆಳಗ್ಗೆ 7 ಗಂಟೆಗೆ ಹೊಸ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ಸಂಸತ್ ಭವನದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ಥಳಿಗೆ ನಮಸ್ಕರಿಸಿದರು.
ಬಳಿಕ ಹೊಸ ಸಂಸತ್ತಿನಲ್ಲಿ ವಾದ್ಯ, ಮಂತ್ರ-ಘೋಷಗಳೊಂದಿಗೆ ಪೂಜೆ ನೆರವೇರಿತು. ಈ ಪೂಜೆಯಲ್ಲಿ ಪ್ರಧಾನಿಯವರ ಪಕ್ಕದಲ್ಲಿ ಲೋಕಸಭಾ ಸ್ಪೀಕರ್ ಕೂಡಾ ಆಸೀನರಾಗಿದ್ದರು.
ರಾಜದಂಡಕ್ಕೆ ಪ್ರಧಾನಿ ಮೋದಿಯವರು ಸಾಷ್ಟಾಂಗ ನಮಸ್ಕಾರ ಕೂಡಾ ಮಾಡಿದರು.
ಪೂಜೆಯ ಬಳಿಕ ಪ್ರಧಾನಿಯವರು ರಾಜದಂಡವನ್ನು ಸ್ಪೀಕರ್ ಪೀಠದ ಪಕ್ಕದಲ್ಲಿ ಇಟ್ಟರು.
ಹೊಸ ಸಂಸತ್ ಭವನದಲ್ಲಿ ಸರ್ವಧರ್ಮ ಕಾರ್ಯಕ್ರಮ ಕೂಡಾ ನೆರವೇರಿತು.
ADVERTISEMENT