ಡಿಸೆಂಬರ್ 1ರಿಂದ ದೇಶಾದ್ಯಂತ ಹೊಸ ಸಿಮ್ ಕಾರ್ಡ್ ನಿಯಮಗಳು ಜಾರಿಗೆ ಬರಲಿವೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ 10ಲಕ್ಷ ರೂಪಾಯಿವರೆಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸಲು ನಿಯಮದಡಿ ಅವಕಾಶ ಮಾಡಿಕೊಡಲಾಗಿದೆ.
ಅಕ್ಟೋಬರ್ 1ರಿಂದಲೇ ಈ ಹೊಸ ನಿಯಮಾವಳಿ ಜಾರಿಯಾಗಬೇಕಿತ್ತು. ಆದರೆ ನಿಯಮಗಳ ಜಾರಿಯನ್ನು ಕೇಂದ್ರ ಸರ್ಕಾರ ಎರಡು ತಿಂಗಳ ಮಟ್ಟಿಗೆ ಮುಂದೂಡಿತ್ತು.
ದೂರಸಂಪರ್ಕ ಇಲಾಖೆ ಹೊರಡಿಸಿರುವ ಹೊಸ ನಿಯಮಗಳು ಹೀಗಿವೆ:
1. ಸಿಮ್ ಡೀಲರ್ ದೃಢೀಕರಣ:
ಸಿಮ್ ಕಾರ್ಡ್ ಮಾರಾಟ ಮಾಡುವ ಡೀಲರ್ಗಳು ನೋಂದಣಿ ಮಾಡಿಕೊಂಡು ದೃಢೀಕೃತ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಸಿಮ್ ಡೀಲರ್ಗಳ ಬಗ್ಗೆ ಟೆಲಿಕಾಂ ಕಂಪನಿಗಳು ಪೊಲೀಸ್ ದೃಢೀಕರಣ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಬೇಕು. ಒಂದು ವೇಳೆ ಈ ನಿಯಮ ಪಾಲಿಸದೇ ಹೋದರೆ ೧೦ ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
2. ಸಿಮ್ ಖರೀದಿ ಮಾಡುವವರು ತಮ್ಮ ಆಧಾರ್ ಸಂಖ್ಯೆಯ ಜೊತೆಗೆ ತಮ್ಮ ವಾಸಸ್ಥಳ, ವಯಸ್ಸು, ಲಿಂಗ ಒಳಗೊಂಡಂತೆ ಇತರೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.
3. ಬಲ್ಕ್ ಸಿಮ್ ಕಾರ್ಡ್ ಖರೀದಿ: ವ್ಯಾಪಾರ, ಉದ್ಯಮದಲ್ಲಿರುವವರೂ ಮಾತ್ರ ತಮ್ಮ ಉದ್ಯಮದ ಹೆಸರಲ್ಲಿ ಬಲ್ಕ್ ಸಿಮ್ ಕಾರ್ಡ್ಗಳನ್ನು ಖರೀದಿ ಮಾಡಬಹುದು. ಸಾಮಾನ್ಯ ಬಳಕೆದಾರರು ಈಗಿರುವಂತೆ ತಮ್ಮ 1 ಐಡಿಯಿಂದ 9 ಸಿಮ್ ಖರೀದಿ ಮಾಡಬಹುದು.
4. ಸಿಮ್ ಕಾರ್ಡ್ ಡಿಆಕ್ಟಿವೇಷನ್: ಒಂದು ವೇಳೆ ೯೦ ದಿನಗಳ ಮಟ್ಟಿಗೆ ಸಿಮ್ ಕಾರ್ಡ್ ರೀಚಾರ್ಚ್ ಮಾಡದೇ ಇದ್ದರೆ ಆ ಬಳಿಕವಷ್ಟೇ ಆ ಸಿಮ್ ಡಿ ಆಕ್ಟಿವೇಟ್ ಆಗುತ್ತೆ. 90 ದಿನದ ಬಳಿಕವಷ್ಟೇ ಆ ಸಿಮ್ನ್ನು ಬೇರೆಯವರಿಗೆ ನೀಡಬಹುದು.
5. ನವೆಂಬರ್ ೩೦ರೊಳಗೆ ನೋಂದಣಿ ಮಾಡಿಕೊಳ್ಳದ ಸಿಮ್ ಕಾರ್ಡ್ ಡೀಲರ್ಗಳಿಗೆ 10 ಲಕ್ಷ ರೂಪಾಯಿ ಮತ್ತು ಜೈಲು ಶಿಕ್ಷೆಯನ್ನೂ ವಿಧಿಸಬಹುದು.
ADVERTISEMENT
ADVERTISEMENT