ಪ್ರಮುಖ ಸುದ್ದಿಸಂಸ್ಥೆ NDTV ಗ್ರೂಪ್ನ್ನೇ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ (Gautam Adani) ಖರೀದಿಸಲಿರುವ ವ್ಯವಹಾರಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
ನಮ್ಮ ಒಪ್ಪಿಗೆ ಅಥವಾ ನಮ್ಮ ಗಮನಕ್ಕೆ ತರದೇ ವ್ಯವಹಾರ ನಡೆಸಲಾಗಿದೆ ಎನ್ಡಿಟಿವಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಎನ್ಡಿಟಿವಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್ಡಿಟಿವಿ) ಅಥವಾ ಅದರ ಸ್ಥಾಪಕರಾದ ರಾಧಿಕಾ ಮತ್ತು ಪ್ರಣಯ್ ರಾಯ್ ಅವರ ಜೊತೆಗೆ ಯಾವುದೇ ಸಮಾಲೋಚನೆ ನಡೆಸದೇ, ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ನಮಗೆ ನೋಟಿಸ್ ನೀಡಿದೆ.
ಆರ್ಆರ್ಪಿಆರ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿ ವಿಸಿಪಿಎಲ್ ಹೇಳಿದೆ. ಈ ಕಂಪನಿ ಎನ್ಡಿಟಿವಿಯ ಶೇಕಡಾ 29.18ರಷ್ಟು ಷೇರನ್ನು ಹೊಂದಿದೆ. ವಿಸಿಪಿಎಲ್ಗೆ ಎಲ್ಲ ಷೇರುಗಳನ್ನು ವರ್ಗಾ ಮಾಡುವಂತೆ ಎರಡು ದಿನ ಕಾಲಾವಕಾಶ ನೀಡಲಾಗಿದೆ.
ಎನ್ಡಿಟಿವಿ ಸಂಸ್ಥಾಪಕರಾದ ರಾಧಿಕಾ ಮತ್ತು ಪ್ರಣವ್ ರಾಯ್ ಅವರ ಜೊತೆಗೆ 2009-10ರಲ್ಲಿ ಆದ ಸಾಲ ಒಪ್ಪಂದದ ಆಧಾರದ ಮೇಲೆ ವಿಸಿಪಿಎಲ್ ತನ್ನ ಹಕ್ಕನ್ನು ಚಲಾಯಿಸಿದೆ.
ವಿಸಿಪಿಎಲ್ ತನ್ನ ಹಕ್ಕನ್ನು ಚಲಾಯಿಸಿದ್ದರ ಬಗ್ಗೆ ಎನ್ಡಿಟಿವಿ ಸಂಸ್ಥಾಪಕರು ಮತ್ತು ಕಂಪನಿಯ ಜೊತೆಗೆ ಸಮಾಲೋಚನೆ ನಡೆಸಿಲ್ಲ ಮತ್ತು ಒಪ್ಪಿಗೆಯನ್ನು ಪಡೆದಿಲ್ಲ ಮತ್ತು ವಿಸಿಪಿಎಲ್ ತನ್ನ ಹಕ್ಕು ಚಲಾಯಿಸಿದ್ದರ ಬಗ್ಗೆ ನಮಗೆ ಇಂದಷ್ಟೇ ತಿಳಿದಿದೆ.
ಸಂಸ್ಥಾಪಕದ ಷೇರು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎನ್ಡಿಟಿವಿ ಷೇರು ಮಾರುಕಟ್ಟೆಗೆ ತಿಳಿಸಿದೆ.ಎನ್ಡಿಟಿವಿ ತನ್ನ ಹೃದಯವಾಗಿರುವ ಪತ್ರಿಕೋದ್ಯಮದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ನಾವು ಯಾವತ್ತೂ ಪತ್ರಿಕೋದ್ಯಮದ ಜೊತೆಗೆ ನಿಲ್ಲಲು ಗರ್ವ ಪಡುತ್ತೇವೆ
ಎಂದು ಎನ್ಡಿಟಿವಿ ಹೇಳಿದೆ.
ADVERTISEMENT
ADVERTISEMENT