ರಾಜ್ಯವನ್ನೇ ಬೆಚ್ಚಿಬೀಳಿದ ರಾಮೇಶ್ವರಂ ಕೆಫೆ ಬಾಂಬ್ ಬ್ಲ್ಯಾಸ್ಟ್ ಪ್ರಕರಣ ಸಂಬಂಧ ಆರೋಪಿ ಪತ್ತೆಗೆ 10 ಲಕ್ಷ ರೂ ಬಹುಮಾನವನ್ನು ಎನ್ಐಎ ಘೋಷಿಸಿದೆ.
9 ನಿಮಿಷದಲ್ಲಿ ಬಾಂಬ್ ಇಟ್ಟು ಪರಾರಿಯಾಗಿರುವ ಆರೋಪಿ ಪತ್ತಗೆ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿದ್ದು ಸದ್ಯ ಈ ಪ್ರಕರಣ ಎನ್ಐಎ ಕೈಯಲ್ಲಿದೆ. ಈಗ ಆರೋಪಿ ಬಗ್ಗೆ ಸುಳುವು ನೀಡಿದವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿದೆ. ಮಾಹಿತಿ ನೀಡಿದವರ ಗುರುತು ಎಲ್ಲೂ ಬಹಿರಂಗಗೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ಎನ್ಐಎ ಹೇಳಿದೆ.
ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್ ಪ್ರಕರಣ ಮಂಗಳೂರು, ಶಿವಮೊಗ್ಗದಲ್ಲಿ ನಡೆದ ಬ್ಲ್ಯಾಸ್ಟ್ ಪ್ರಕರಣಗಳಿಗೆ ಹೋಲಿಕೆಯಾಗುತ್ತಿದ್ದು , ಈ ಪ್ರಕರಣದ ಹಿಂದೆ ದೊಡ್ಡ ಉಗ್ರ ಸಂಘಟನೆ ಕೈವಾಡವಿದೆ ಎಂದು ಶಂಕಿಸಲಾಗಿದೆ.