ಕರ್ನಾಟಕ (Karnataka) ಸೇರಿದಂತೆ ಹಲವು ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) (ಪಿಎಫ್ಐ PFI) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಬೆಳಗ್ಗೆ ದಾಳಿ ನಡೆಸಿದೆ.
ಭಯೋತ್ಪಾದಕ ಚಟುವಟಿಕೆ (Terror Activities) ಮಟ್ಟ ಹಾಕುವ ಸಲುವಾಗಿ ಇರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳ ತಂಡ ಕರ್ನಾಟಕ, ಕೇರಳ (Kerala), ಉತ್ತರಪ್ರದೇಶ (Uttar Pradesh), ಆಂಧ್ರಪ್ರದೇಶ (Andrapradesh), ತೆಲಂಗಾಣ (Telagana), ತಮಿಳುನಾಡು (Tamilnadu) ಒಳಗೊಂಡು ಹತ್ತು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ (Money Laundering) ಸಂಬಂಧ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ (ED) ಮತ್ತು ಆಯಾಯ ರಾಜ್ಯಗಳ ಪೊಲೀಸರ (State Police) ನೆರವನ್ನು ಪಡೆಯಲಾಗಿದೆ.
ಉಗ್ರರ ಚಟುವಟಿಕೆ ನಿಗ್ರಹಿಸುವ ಸಂಬಂಧ ಎನ್ಎಐ ನಡೆಸಿರುವ ಅತೀ ದೊಡ್ಡ ದಾಳಿ ಇದಾಗಿದ್ದು, ಪಿಎಫ್ಐನ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸೇರಿ 100ಕ್ಕೂ ಅಧಿಕ ಮಂದಿ ಪಿಎಫ್ಐ ಪದಾಧಿಕಾರಿಗಳನ್ನು ಬಂಧಿಸಲಾಗಿದೆ.
ಆಂಧ್ರ ಮತ್ತು ತೆಲಂಗಾಣ ಈ ಎರಡು ರಾಜ್ಯಗಳಲ್ಲೇ 38 ಕಡೆಗಳಲ್ಲಿ ಎನ್ಐಎ ಶೋಧ ನಡೆಸಿದೆ.
ಉಗ್ರರಿಗೆ ಹಣಕಾಸು ನೆರವು, ಉಗ್ರ ತರಬೇತಿ ಶಿಬಿರಗಳ ಆಯೋಜನೆ ಸೇರಿದಂತೆ ಭಯೋತ್ಪಾದಕ ಕೃತ್ಯಗಳಿಗೆ ನೆರವಾದ ಆರೋಪದಡಿ ಪಿಎಫ್ಐನ ಪದಾಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕೈಗೊಳ್ಳಲಾಗಿದೆ.
ADVERTISEMENT
ADVERTISEMENT