ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಮತದಾನ ನಡೆಯುತ್ತಿದೆ. ನಾಲ್ಕನೇ ಅಭ್ಯರ್ಥಿಯ ಆಯ್ಕೆಯೇ ಕತೂಹಲಕಾರಿ ಆಗಿದೆ.
ಬಿಜೆಪಿಯಿಂದ ಮೊದಲ ಅಭ್ಯರ್ಥಿಯಾಗಿ 45 ಮತಗಳನ್ನು ಪಡೆದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ರಾಜ್ಯಸಭೆಗೆ ಕರ್ನಾಟಕದಿಂದಲೇ ಪುನರಾಯ್ಕೆ ಆಗಿದ್ದಾರೆ.
ಕಾಂಗ್ರೆಸ್ನಿAದ ಮೊದಲ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಅವರು 45 ಮತಗಳನ್ನು ಪಡೆದು ಮತ್ತೆ ರಾಜ್ಯಸಭೆಗೆ ಕರ್ನಾಟಕದಿಂದಲೇ ಪುನರಾಯ್ಕೆ ಆಗಿದ್ದಾರೆ.
ಸಂಜೆ 4 ಗಂಟೆಗೆ ಮತದಾನ ಮುಕ್ತಾಯ ಆಗಲಿದ್ದು, ಮತ ಎಣಿಕೆ ಬಳಿಕ ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಿದೆ.