ಕೇಂದ್ರದ ಕಾನೂನು ಸಚಿವರು ಕರೆದಿದ್ದ ಸಭೆಯಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೂರುಉಳಿಯಲು ತೀರ್ಮಾನಿಸಿದ್ದಾರೆ. ತಮ್ಮ ಪರವಾಗಿ ಸಭೆಯಲ್ಲಿ ಹಾಜರಾಗುವಂತೆ ರಾಜ್ಯದ ಕಾನೂನು ಸಚಿವರಿಗೆ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರು ಸಭೆಗೆ ಸೇರಲು ನಿರಾಕರಿಸಿರುವುದು ಮಿತ್ರಪಕ್ಷ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿರುವ ಸಂಕೇತವೆಂದು ಹೇಳಲಾಗುತ್ತಿದೆ. ಬಿಜೆಪಿಯ ವಿವಿಧ ನಾಯಕರ ಇತ್ತೀಚಿಗೆ ನಿತೀಶ್ ಕುಮಾರ್ ಬದಲಿಗೆ “ಬಿಜೆಪಿ ಮುಖ್ಯಮಂತ್ರಿ” ಯನ್ನು ನೇಮಿಸುವಂತೆ ಹೇಳುತ್ತಿದ್ದಾರೆ.
ಬಿಹಾರದ ಬಿಜೆಪಿ ಶಾಸಕ ವಿನಯ್ ಬಿಹಾರಿಯವರು ಬಹಿರಂಗವಾಗಿಯೇ ನಿತೀಶ್ ಅವರನ್ನು ಮುಖ್ಯಮಂತ್ರಿ ಸ್ಥಾನನದಿಂದ ಕೆಳಗಿಳಸಬೇಕು. ಆ ಸ್ಥಾನಕ್ಕೆ ಬಿಜೆಪಿಯ ತಾರ್ಕಿಶೋರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಹೇಳಿಕೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಬಿಜೆಪಿಯಲ್ಲಿನ ಶಾಸಕರು ಇದೇ ಹೇಳಿಕೆಯನ್ನು ಪುನರುಚ್ಚರಿಸುತ್ತಿದ್ದಾರೆ. ಈ ಹೇಳಿಕೆಗಳಿಂದ ನಿತೀಶ್ ಕುಮಾರ ನೊಂದಿದ್ದಾರೆ ಎಂದು ಅವರ ಆಪ್ತರಿಂದ ತಿಳಿದುಬಂದಿದೆ.
ಬುಧವಾರ ನಡೆದ ಇಫ್ತಾರ್ ಕೂಟದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಉಪ ಮುಖ್ಯಮಂತ್ರಿ ತಾರ್ಕಿಶೋರ್ ಅವರಿಗಿಂತ ವಿರೋಧ ಪಕ್ಷ ಆರ್ಜೆಪಿಯ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಆಪ್ತರಾಗಿರುವಂತೆ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಅವರು ತೇಜಸ್ವಿ ಯಾದವ್ ಹಾಗೂ ಅವರ ಸಹೋದರ್ ಪ್ರತಾಪ್ ಯಾದವ್ ಅವರನ್ನು ಹೆಚ್ಚಾಗಿಯೇ ಭೇಟಿಯಾಗುತ್ತಿದ್ದಾರೆ.
ನಿತೀಶ್ ಕುಮಾರ್ ಅವರು ಇನ್ನು ಕೇಲವೇ ದಿನಗಳಲ್ಲಿ ತಮ್ಮ ಸಚಿವ ಸಂಪುಟವನ್ನು ಪುನರ್ ರಚನೆ ಮಾಡಲಿದ್ದಾರೆ. ಅರ್ಧ ಡಜನ್ಗಿಂತಲೂ ಹೆಚ್ಚು ಜನ ನೂತನ ಸಚಿವರನ್ನು ಜೆಡಿಯು ಹಾಗೂ ಬಿಜೆಪಿಯಿಂದ ನೇಮಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಉತ್ತಮ ಕೆಲಸ ನಿರ್ವಹಿಸದ ಸಚಿವರನ್ನು ಕೈ ಬಿಡುವುದಾಗಿ ಬಿಜೆಪಿ ಘೊಷಿಸಿದೆ.
ಆದರೆ, 2020 ರ ಚುನಾವಣೆಯಲ್ಲಿ ಆರ್ಜೆಡಿ ಪಕ್ಷಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.
ಸಮಿಶ್ರ ಸರ್ಕಾರವಾದ ಬಿಜೆಪಿ ಶಾಸಕರು ಹಾಗೂ ಆರ್ಜೆಡಿ ಪಕ್ಷದ ನಡುವೆ ತೀವ್ರ ಘರ್ಷಣೆ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಬಿಹಾರದ ಪಾಟ್ನಾಗೆ ಭೇಟಿ ನೀಡಿದ್ದ ಕೇಮದ್ರ ಸಚಿವ ಅಮಿತ್ ಷಾ ಅವರೂ ಸಹಿತ ನಿತೀಶ್ ಕುಮಾರ್ ಅವರಿಂದ ಅಲ್ಪ ಮಟ್ಟದ ಅಂತರ ಕಾಯ್ದುಕೊಂಡಿದ್ದರು.
ಪ್ರಸ್ತುತ ವಿದ್ಯಮಾನಗಳಿಂದ ಸಿಎಂ ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದಂತು ಅತ್ಯ. ಸಮ್ಮಿಶ್ರ ಸರ್ಕಾರದಲ್ಲಿನ ಎರಡು ಪಕ್ಷಗಳ ಈ ಅಂತರ ಮುಂದೆ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.