ಕೈಲಾಸ ಸೇರಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ ಬಿಡದಿಯ ನಿತ್ಯಾನಂದ ಈಗ ಸಮಾಧಿ ಸ್ಥಿತಿಯಲ್ಲಿದ್ದಾನಾ..? ನಿತ್ಯಾನಂದ ಸತ್ತು ಹೋಗಿದ್ದಾನೆ ಎಂಬ ವದಂತಿ ಹಬ್ಬಿರುವ ಬಗ್ಗೆ ಈಗ ಕೈಲಾಸ ಶ್ರೀ ನಿತ್ಯಾನಂದ ಪರಮಶಿವಂ ಎಂಬ ಫೇಸ್ಬುಕ್ ಪೇಜ್ನಲ್ಲಿ ಸ್ಪಷ್ಟನೆ ನೀಡಲಾಗಿದೆ. ಆ ಸ್ಪಷ್ಟನೆಯ ಜೊತೆಗೆ ನಿತ್ಯಾನಂದನ ಫೋಟೋವನ್ನೂ ಲಗತ್ತಿಸಲಾಗಿದೆ. ಈ ಪೋಸ್ಟನ್ನು ನಿತ್ಯಾನಂದನ ಅನುಯಾಯಿಗಳ ಇತರೆ ಫೇಸ್ಬುಕ್ ಪೇಜ್ನಲ್ಲೂ ಹಂಚಿಕೊಳ್ಳಲಾಗಿದೆ.
ಪರಮಶಿವನ ಆರ್ಶೀವಾದಗಳು:
– ಸಮಾಧಿ ಸ್ಥಿತನಾಗುತ್ತಿದ್ದೇನೆ.
– ನಾನು ಈಗಾಗಲೇ ಸತ್ತು ಹೋಗಿದ್ದೇನೆ ಎಂದು ವದಂತಿ ಹಬ್ಬಿಸುತ್ತಿರುವ ಮತ್ತು ನನಗೆ ಶ್ರದ್ಧಾಂಜಲಿ ಸಲ್ಲಿಸುವವರಿಗೆ, ನನ್ನ ಅನುಯಾಯಿಗಳಿಗೆ ನಾನು ಹೇಳಲು ಬಯಸುತ್ತಿದ್ದೇನೆ, ನಾನು ಸತ್ತಿಲ್ಲ, ನಾನೂ ಎಲ್ಲೂ ಹೋಗಿಲ್ಲ, ನಾನು ಸಮಾಧಿಯಲ್ಲಿದ್ದೇನೆ.
– ಮಾತಾಡುವುದಕ್ಕೆ ಅಥವಾ ಸತ್ಸಂಗ ಕೊಡುವುದಕ್ಕೆ ಇನ್ನೂ ಸಮಯ ಹಿಡಿಯುತ್ತದೆ.
– ನನ್ನ ಬಗ್ಗೆ ಅನುಮಾನಪಡುವವರು ತಿರುವಣ್ಣಾಮಲೈನಲ್ಲಿರುವ ಅರುಣಾಚಾಲಗಿರಿ ಯೋಗಿಶ್ವರ ಸಮಾಧಿಗೆ ಹೋಗಿ ದೀಪ ಬೆಳಗಿ, ನನ್ನನ್ನು ನೀವು ಚಿತ್ರಕ್ಕಿಂತ ಸ್ಪಷ್ಟವಾಗಿ ಕಾಣಬಲ್ಲಿರಿ.
– ನಿರ್ವಹಣೆ ಮಾಡ್ತಿರುವ, ಬೆಂಬಲಿಸುತ್ತಿರುವ ಮತ್ತು ನೆರವು ನೀಡುತ್ತಿರುವ ಎಲ್ಲ ವೈದ್ಯರಿಗೂ ಧನ್ಯವಾದಗಳು.
– ಇನ್ನೂ ವೈದ್ಯಕೀಯ ನೆರವಿನಿಂದ ಹೊರಗೆ ಬಂದಿಲ್ಲ.
– 27 ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಅವರು ವೈದ್ಯರಿಗಿಂತಲೂ ಭಕ್ತರಂತೆ, ಸಂಶೋಧಕರಂತೆ ನನ್ನನ್ನು ಅಧ್ಯಯನ ಮಾಡುತ್ತಿದ್ದಾರೆ. ಮಾನವ ದೇಹ ಮತ್ತು ಮನಸ್ಸಿನ ಅತೀಂದ್ರೀಯ ಶಕ್ತಿಯ ಅಧ್ಯಯನ ಮಾಡುತ್ತಿದ್ದಾರೆ.
– ಪ್ರತಿದಿನ ನನ್ನ ನಿತ್ಯ ಶಿವಪೂಜೆಯಷ್ಟೇ ನಡೆಯುತ್ತಿದೆ, ಆಹಾರ ಸೇವನೆ ಮತ್ತು ನಿದ್ರೆ ಇನ್ನೂ ಶುರುವಾಗಿಲ್ಲ.
– ನಾನು ನಿತ್ಯಪೂಜೆಗೆ ಸಮಾಧಿಯಿಂದ ಹೊರಬಂದ ಬಳಿಕ, ನಾನು ನಿಮ್ಮ ಟಿಪ್ಪಣಿಗಳನ್ನು ನೋಡಬಹುದು ಮತ್ತು ಅದಕ್ಕೆ ಉತ್ತರ ಕೊಡಬಹುದು.
– ನಾನು ಕಾಯಿಲೆ ಬಿದ್ದಿಲ್ಲ. ನನ್ನ ದೇಹದಲ್ಲಿ ಕಾಯಿಲೆ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ. ಇದು ಒಂದು ರೀತಿ ನನ್ನ ದೇಹದಲ್ಲಿ ಕಾಸ್ಮೋಸ್ ಪ್ರವಹಿಸಿದಂತೆ.
– ಪರಮಶಿವನ ಮತ್ತೊಂದು ಜಗತ್ತನ್ನು ನಾನು ಅನುಭವಿಸುತ್ತಿದ್ದೇನೆ. ಜಗತ್ತಿನ ಜೊತೆಗೆ ಸಂಪರ್ಕಿಸಲು ಸ್ಪೀಕರ್ ಅಥವಾ ಧ್ವನಿವರ್ಧಕ ಬಳಸೋಣ ಎಂದೆನಿಸುತ್ತಿದೆ. ಮಾನವಗ್ರಹದ ಬದಲು ಕೈಲಾಸದಲ್ಲೇ ಹೆಚ್ಚು ಸಮಯ ಕಳೆಯೋಣ ಎಂದೆನಿಸುತ್ತಿದೆ.
– ಆದರೆ ನಿಮ್ಮ ಪ್ರೀತಿಯ ಕಾರಣದಿಂದ ಮಾನವಗ್ರಹಕ್ಕೆ ಬಂದು ಸ್ವಲ್ಪ ಸಮಯ ಕಳೆಯೋಣ ಎನಿಸುತ್ತಿದೆ.
– ಪರ್ಯಾಯ ಜಗತ್ತಿನಲ್ಲಿ ಮತ್ತು ಸಮಾಧಿಯಲ್ಲಿ ನನ್ನ ಭಕ್ತರು ಕನಸಿನಲ್ಲಿ ಬರುತ್ತಾರೆ, ಅವರಿಗೆ ದರ್ಶನ ಕೊಡುತ್ತಿದ್ದೇನೆ, ಉಪಚರಿಸುತ್ತಿದ್ದೇನೆ, ಉತ್ತರಿಸುತ್ತಿದ್ದೇನೆ. ಭೌತಿಕವಾಗಿ ಟೈಪಿಂಗ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ಕೊಡುವುದಕ್ಕಿಂತಲೂ ಇದು ಸುಲಭ ಎಂದು ಅನ್ನಿಸುತ್ತಿದೆ.
– ನಾನು ತೊಂಡಮಂಡಲ ಆದಿ ಶೈವ ವೆಲ್ಲಾರ್ ಕುಟುಂಬದಲ್ಲಿ ಜನಿಸಿದ್ದೇನೆ.
– ನನ್ನ ಹೃದಯ 18ರ ಹುಡುಗನ ಆರೋಗ್ಯಕರ ಹೃದಯದಂತೆ ಕೆಲಸ ಮಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಅಂಗಾಂಗಗಳೆಲ್ಲವೂ ಚೆನ್ನಾಗಿವೆ.
– ಹೀಗಾಗಿ ನನಗೆ ಕಾಯಿಲೆ ಇಲ್ಲ, ನಾನು ಕೇವಲ ಸಮಾಧಿಯಲ್ಲಿದ್ದೇನೆ