ಇವತ್ತು ಮಾರ್ಚ್ 24.. ಸರ್ಕಾರಿ ಸ್ವಾಮ್ಯದ ನೋಟಿಫಿಕೇಶನ್ ಪ್ರಕಾರ ದೇಶದಲ್ಲಿ ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ.
ಮಂಗಳವಾರ ಮತ್ತು ಬುಧವಾರ ತೈಲ ಬೆಲೆ ಏರಿಕೆ ಖಂಡಿಸಿ ಸಂಸತ್ತಿನ ಹೊರಗೆ ಒಳಗೆ ವಿರೋಧ ಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದ್ದವು. ಅದರ ಪರಿಣಾಮವೋ ಏನೋ ಗೊತ್ತಿಲ್ಲ. ಮೂರನೇ ದಿನ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಿಸಿಲ್ಲ.
ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 102.26 ರೂಪಾಯಿ, ಡೀಸೆಲ್ ಬೆಲೆ 86.58ರೂಪಾಯಿ ಇದೆ.
ಕೇವಲ ಎರಡೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 1.64ರೂಪಾಯಿ ಹೆಚ್ಚಳವಾಗಿತ್ತು.
ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ NCP ಸಂಸದೆ ಸುಪ್ರಿಯಾ ಸುಳೇ, ತೈಲ ಬೆಲೆ ಏರಬಾರದು ಎಂದರೇ ತಿಂಗಳಿಗೊಮ್ಮೆ ಚುನಾವಣೆ ನಡೆಯಬೇಕೇನೋ ಎಂದು ವ್ಯಂಗ್ಯ ಮಾಡಿದ್ದರು.