ADVERTISEMENT
ಬೆಂಗಳೂರಿನ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸೋಮವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೆಟ್ರೋ ರೈಲುಗಳ ಓಡಾಟ ಇರಲ್ಲ.
ಈ ಬಗ್ಗೆ ಬಿಎಂಆರ್ಸಿಎಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನಿರ್ವಹಣೆ ಕೆಲಸಕ್ಕಾಗಿ ಜೂನ್ 17ರಂದು ಮಧ್ಯಾಹ್ನ 1 ಗಂಟೆವರೆಗೆ ಮೆಟ್ರೋ ರೈಲಿನ ಓಡಾಟ ಇರಲ್ಲ. ಮಧ್ಯಾಹ್ನ 1 ಗಂಟೆ ನಂತರ ಚಲ್ಲಘಟ್ಟ ಮತ್ತು ವೈಟ್ಫೀಲ್ಡ್ ನಡುವೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿಯ ಪ್ರಕಾರವೇ ಮೆಟ್ರೋ ರೈಲಿನ ಓಡಾಟ ಇರಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ADVERTISEMENT