ನಾಳೆಯಿಂದ Ola, Uber ಮತ್ತು Rapidoದಲ್ಲಿ ಆಟೋ ಸೇವೆ ಇರಲ್ಲ.
ಒಂದು ವೇಳೆ ನಾಳೆಯಿಂದಲೂ ಅಂದರೆ ಅಕ್ಟೋಬರ್ 12ರ ಬುಧವಾರದಿಂದಲೂ Ola, Uber, Rapido ಆಟೋ ಸೇವೆಯನ್ನು ನೀಡಿದರೆ ಆಗ ಪ್ರತಿಯೊಂದು ಆಟೋಗೆ 5 ಸಾವಿರ ರೂಪಾಯಿ ದಂಡ ಹಾಕುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಆದರೆ ಈ ಮೂರು APP ಆಧಾರಿತ ಕಂಪನಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಟ್ಯಾಕ್ಸಿ, ಕ್ಯಾಬ್ ಸೇವೆಯನ್ನು ಮುಂದುವರಿಸಲಿವೆ.
ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಪ್ರತಿ ಆಟೋಗೂ ಕಂಪನಿಗಳ ಕಡೆಯಿಂದಲೇ 5 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗುತ್ತದೆ.
ಸಾರಿಗೆ ಇಲಾಖೆ ಪ್ರಕಾರ ಮೂರು ಕಂಪನಿಗಳು APP ಆಧಾರಿತವಾಗಿ ಆಟೋಗಳನ್ನು ಓಡಿಸಲು ಅನುಮತಿಯನ್ನು ಪಡೆದಿಲ್ಲ.
ಇವತ್ತು ಸಾರಿಗೆ ಆಯುಕ್ತರ ಜೊತೆಗೆ ನಡೆದ ಸಭೆಯಲ್ಲಿ ಮೂರು ಕಂಪನಿಗಳು ಆಟೋಗಳನ್ನು ಓಡಿಸುವ ಸಲುವಾಗಿ ಸಾರಿಗೆ ಇಲಾಖೆ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿವೆ.