ADVERTISEMENT
ಒಂದೆಡೆ ಧಾರಾಕಾರ ಮಳೆಗೆ ಬೆಂಗಳೂರಿನ (Bengaluru Bangalore) ಬಹುತೇಕ ಭಾಗಗಳು ಜಲಾವೃತಗೊಂಡಿದ್ದರಿಂದ ಇತ್ತ ರಾಜಧಾನಿಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.
ಇವತ್ತು ಮತ್ತು ನಾಳೆ ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಕೆ ಆಗಲ್ಲ.
ಬೆಂಗಳೂರಿಗೆ ಕಾವೇರಿ (Cauvery) ನದಿಯಿಂದ ನೀರು ಪೂರೈಕೆ ಮಾಡುವ ಮಂಡ್ಯ (Mandya) ಜಿಲ್ಲೆಯ ಟಿ ಕೆ ಹಳ್ಳಿಯಯಲ್ಲಿರುವ ಘಟಕ ಸಂಪೂರ್ಣ ಜಲಾವೃತಗೊಂಡಿದ್ದು, ಘಟಕವನ್ನು ಮುಚ್ಚಲಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿ ಘಟಕದಿಂದ ನೀರನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮಂಡ್ಯಕ್ಕೆ ತುರ್ತು ಪ್ರಯಾಣ ಬೆಳೆಸಿದ್ದಾರೆ.
ಮಳವಳ್ಳಿ ತಾಲೂಕಿನಲ್ಲಿರುವ ಜಲರೇಚಕ ಯಂತ್ರಾಗಾರದಿಂದ ( (Hydraulic Pumps / Hydro Pumps) ಬೆಂಗಳೂರಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಕಾವೇರಿ ನೀರು ಪೂರೈಕೆಯ 3ನೇ ಮತ್ತು 4ನೇ ಹಂತದ ಯಂತ್ರಾಗಾರ ಜಲಾವೃತಗೊಂಡಿದೆ.
ಪ್ರತಿದಿನ ಟಿಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1450 MLD ನೀರು ಸರಬರಾಜು ಆಗುತ್ತಿತ್ತು. ಆದರೆ ನಿನ್ನೆ ರಾತ್ರಿ ಸೇರಿದಂತೆ 600 MLD ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 MLD ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಎರಡು ದಿನ ನೀರಿನ ಅಭಾವ ಉಂಟಾಗುವ ಸಾಧ್ಯತೆ, ಮಿತವಾಗಿ ನೀರು ಬಳಸುವಂತೆ ಬೆಂಗಳೂರು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಮನವಿ ಮಾಡಿದೆ.
ನೀರಿನ ಕೊರತೆ ಉಂಟಾಗಬಹುದಾದ ಪ್ರದೇಶಗಳು: BWSSB ಪ್ರಕಟಣೆ


ADVERTISEMENT