ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL ಟ್ರೋಫಿ ಗೆಲ್ಲೋವರೆಗೂ ನಾನು ಮದುವೆ ಮಾಡಿಕೊಳ್ಳಲ್ಲ ಎಂದು RCB ಯ ಕಟ್ಟಾ ಅಭಿಮಾನಿಯೊಬ್ಬರು ಎಂದು ಕುಳಿತಿದ್ದಾರೆ.
#CSKv/sRCB ಮ್ಯಾಚ್ ವೇಳೆ, ನಮ್ಮ RCB, IPL ಟ್ರೋಫಿ ಗೆಲ್ಲೋವರೆಗೂ ನಾನು ಮದುವೆ ಮಾಡಿಕೊಳ್ಳಲ್ಲ ಎಂದು ಬ್ಯಾನರ್ ಹಿಡಿದ ಸುಂದರಿಯೊಬ್ಬರೂ ಎಲ್ಲರ ಗಮನ ಸೆಳೆದಿದ್ದಾರೆ.
ಈ ಫೋಟೋವನ್ನು ಕ್ರಿಕೆಟರ್ ಅಮಿತ್ ಶರ್ಮಾ ಟ್ವೀಟ್ ಮಾಡಿದ್ದು, ಸದ್ಯ ಆಕೆಯ ತಂದೆ ತಾಯಿ ತುಂಬಾ ಟೆನ್ಶನ್ ಮಾಡಿಕೊಂಡಿರುತ್ತಾರೆ ಎಂದು ಟ್ವೀಟಿಸಿದ್ದಾರೆ.
ಹಲವರು ಡಿಫ್ರೆಂಟ್ ಡಿಫ್ರೆಂಟ್ ಆಗಿ ನಗೆ ಉಕ್ಕಿಸುವ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಮದ್ವೆ ಯಾವಾಗ ಮಾಡ್ಕೊತೀಯ ಅಂತಾ ನೆಂಟರು ಕೇಳಿದರೆ ಹೇಳೋಕೆ ಒಂದು ರೀಸನ್ ಸಿಕ್ಕಿತು ಎಂದು ಜೋಕ್ ಸಿಡಿಸಿದ್ದಾರೆ.