ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡದ್ದ ರೂಪೇಶ್ ರಾಜಣ್ಣ (Rupesh Rajanna) ಬಿಗ್ ಬಾಸ್ ಸೀಸನ್ 9 (Bigg Boss) ವೇದಿಕೆಗೆ ಹೋಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆ.
ಈ ಹಿಂದೆ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆ ಮೇಲೆ Bigg Boss ಎಂದು ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದಾರೆ. ಇದು ಕನ್ನಡ ಭಾಷೆಗೆ ಬದಲಾಗಬೇಕು ಹೋರಾಡಿದ್ದರು. ಅಲ್ಲದೇ, ಬಿಗ್ ಬಾಸ್ ಕಾರ್ಯಕ್ರಮದ ಮುಖ್ಯಸ್ಥರು ಕನ್ನಡದಲ್ಲಿ ಹಾಕಿದ್ರೆ ಒಂದು ರೂಪಾಯಿಯ ವ್ಯಾಪಾರ ಆಗಲ್ಲ ಎಂದು ಉಡಾಫೆಯ ಮಾತಾಡಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ, ರೂಪೇಶ್ ರಾಜಣ್ಣ (Rupesh Rajanna) ಅವರೇ ಬಿಗ್ ಬಾಸ್ ವೇದಿಕೆಗೆ ಹೋಗಿದ್ದಾರೆ. ಆ ಮೂಲಕ ಅವರು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಸಂದೇಶಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ರೂಪೇಶ್ ರಾಜಣ್ಣ ಬಿಗ್ ಬಾಸ್ ವೇದಿಕೆಗೆ ಹೋಗಿರುವುದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದನ್ನೂ ಓದಿ : BBK9- ಮೊದಲ ದಿನವೇ ಬಿಗ್ ಬಾಸ್ ಮನೆ ರಣ ರಣ
ಮತ್ತೊಬ್ಬ ಕನ್ನಡಪರ ಹೋರಾಟಗಾರರು, ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷರಾಗಿರುವ ಭೈರಪ್ಪ ಹರೀಶ್ ಅವರು ಬಿಗ್ಬಾಸ್ ವೇದಿಕೆಯಿಂದ ನನಗಾಗಿ ಬಂದ ಅವಕಾಶವನ್ನು ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ತಾಯಿ ಭುವನೇಶ್ವರಿ ಸಾಕ್ಷಿಯಾಗಿ ನಾನಂತೂ ನಯವಾಗಿ ತಿರಸ್ಕರಿಸಿದೆ. ನನ್ನ ಹಾದಿಯೇ ಬೇರೆ ನನ್ನ ಗುರಿಯೇ ಬೇರೆ, ನನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಕನ್ನಡ- ಕನ್ನಡಿಗ- ಕರ್ನಾಟಕ ಒಳಿತಿಗಾಗಿ ಶ್ರಮಿಸುವೆ , ಕನ್ನಡವೇ ನನ್ನ ಸರ್ವಸ್ವ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಇದು ಮೊದಲ ಸೀಸನ್, 9ನೇಯದ್ದಲ್ಲ..! ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ.!