ಹೊಸ ವರ್ಷದ ಆರಂಭದಲ್ಲೇ ನಡೆಯಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಒಟ್ಟು 19 ದಿನ ಪಂದ್ಯಗಳು ನಡೆಯಲಿವೆ.
ಈ ವೇಳಾಪಟ್ಟಿಯ ಪ್ರಕಾರ ಗ್ರೂಪ್ ಎನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಗ್ರೂಪ್ ಬಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ.
ಚಾಂಪಿಯನ್ಸ್ ಟ್ರೋಫಿಯ ಮೊದಲ ಅಥವಾ ಉದ್ಘಾಟನಾ ಪಂದ್ಯ ಪಾಕಿಸ್ತಾನದ ಕರಾಚಿಯಲ್ಲಿ ನಡೆಯಲಿದೆ. ಫೆಬ್ರವರಿ 19ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಫೆಬ್ರವರಿ 20ರಂದು ಭಾರತ ಮತ್ತು ಬಾಂಗ್ಲಾ ದೇಶ ನಡುವೆ ದುಬೈನಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 21: ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕರಾಚಿಯಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 22ರಂದು ಪಾಕಿಸ್ತಾನದ ಲಾಹೋರ್ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯಲಿದೆ.
ಫೆಬ್ರವರಿ 23: ಭಾರತ-ಪಾಕಿಸ್ತಾನದ ನಡುವೆ ದುಬೈನಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 24ರಂದು ಬಾಂಗ್ಲಾದೇಶ-ನ್ಯೂಜಿಲೆಂಡ್ ನಡುವೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 25ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 26ರಂದು ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಲಾಹೋರ್ನಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 27ರಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ರಾವಲ್ಪಿಂಡಿಯಲ್ಲಿ ಪಂದ್ಯ ನಡೆಯಲಿದೆ.
ಫೆಬ್ರವರಿ 28ರಂದು ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಲಾಹೋರ್ನಲ್ಲಿ ಪಂದ್ಯ ನಡೆಯಲಿದೆ.
ಮಾರ್ಚ್ 1ರಂದು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಕರಾಚಿಯಲ್ಲಿ ಪಂದ್ಯ ನಡೆಯಲಿದೆ.
ಮಾರ್ಚ್ 2ರಂದು ನ್ಯೂಜಿಲೆಂಡ್ ಮತ್ತು ಭಾರತ ನಡುವೆ ದುಬೈನಲ್ಲಿ ಪಂದ್ಯ ನಡೆಯಲಿದೆ.
ಮಾರ್ಚ್ 4ರಂದು ಮೊದಲ ಸೆಮಿಫೈನಲ್ ದುಬೈನಲ್ಲಿ ನಡೆಯಲಿದೆ.
ಮಾರ್ಚ್ 5ರಂದು 2ನೇ ಸೆಮಿಫೈನಲ್ನಲ್ಲಿ ಲಾಹೋರ್ನಲ್ಲಿ ನಡೆಯಲಿದೆ.
ಮಾರ್ಚ್ 9ರಂದು ಫೈನಲ್ ಪಂದ್ಯ ಲಾಹೋರ್ನಲ್ಲಿ ನಡೆಯಲಿದೆ. ಒಂದು ವೇಳೆ ಫೈನಲ್ಗೆ ಭಾರತ ಪ್ರವೇಶಿಸಿದರೆ ಆಗ ಫೈನಲ್ ಪಂದ್ಯ ಲಾಹೋರ್ ಬದಲು ದುಬೈನಲ್ಲಿ ನಡೆಯಲಿದೆ.
ಮಾರ್ಚ್ 10ರಂದು ಮೀಸಲು ದಿನವಾಗಿ ಐಸಿಸಿ ಘೋಷಣೆ ಮಾಡಿದೆ.
ಎಲ್ಲ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿವೆ.
ADVERTISEMENT
ADVERTISEMENT