ಭಾರತದತ್ತ ಹೊರಟ್ಟಿದ್ದ ಕಚ್ಚಾ ತೈಲ ಸಾಗಿಸುವ ಹಡಗಿನ ಮೇಲೆ ಡ್ರೋನ್ ಮೂಲಕ ಕ್ಷಿಪಣಿ ದಾಳಿ ನಡೆಸಲಾಗಿದೆ. ಇರಾನ್ ಬೆಂಬಲಿತ ಹೌತಿ ಸಂಘಟನೆ ದಾಳಿ ನಡೆಸಿದೆ ಎಂದು ಅಮೆರಿಕ ಸೇನೆ ಹೇಳಿದೆ.
ಕೆಂಪು ಸಮುದ್ರದ ದಕ್ಷಿಣ ಭಾಗದಲ್ಲಿ ದಾಳಿ ನಡೆದಿದೆ. ಎಂ ವಿ ಸಾಯಿಬಾಬಾ ಹೆಸರಿನ ಈ ಹಡಗಿನಲ್ಲಿ 25 ಮಂದಿ ಭಾರತೀಯರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಭಾರತ ಮತ್ತು ಅಮೆರಿಕದ ಸೇನೆ ಹೇಳಿದೆ. ನಿನ್ನೆ ರಾತ್ರಿ 10.30ರ ವೇಳೆಗೆ ದಾಳಿ ನಡೆದಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹೊತ್ತಲ್ಲೇ ಯೆಮನ್ ಮೂಲದ ಇರಾನ್ ಬೆಂಬಲಿತ ಹೌತಿ ಸಂಘಟನೆ ಕೆಂಪು ಸಮುದ್ರದ ಮೂಲಕ ಸಂಚರಿಸುತ್ತಿರುವ ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.
ಅಮೆರಿಕ ಸೇನೆಯ ಮಾಹಿತಿ ಪ್ರಕಾರ ಅಕ್ಟೋಬರ್ 17ರಿಂದ ಹೌತಿ ಸಂಘಟನೆ ಹಡಗುಗಳ ಮೇಲೆ ನಡೆಸಿರುವ 17ನೇ ಕ್ಷಿಪಣಿ ದಾಳಿ ಇದಾಗಿದೆ.
ನಿನ್ನೆಯಷ್ಟೇ ಸೌದಿ ಅರೇಬಿಯಾದಿಂದ ಮಂಗಳೂರಿಗೆ ಹೊರಟ್ಟಿದ್ದ ಕಚ್ಚಾ ತೈಲ ತುಂಬಿದ್ದ ಹಡಗಿಗೆ ಅರಬ್ಬಿ ಸಮುದ್ರದ ಗುಜರಾತ್ನ ಪೋರಂಬಂದರ್ ಕರಾವಳಿಯಿಂದ 271 ನಾಟಿಕಲ್ ಮೈಲಿ ದೂರದಲ್ಲಿ ಡ್ರೋಣ್ ಮೂಲಕ ದಾಳಿ ನಡೆಸಲಾಗಿತ್ತು.
ADVERTISEMENT
ADVERTISEMENT