ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು (India Independence Day) ಓಲಾ ಕಂಪನಿಯ (Ola) ಮಾಲೀಕ ಭವೀಶ್ ಅಗರ್ವಾಲ್ (Bhavish Aggarwal) ಅವರು ಎಲೆಕ್ಟ್ರಿಕ್ ಆಟೋ ಮೊಬೈಲ್ ಕ್ಷೇತ್ರದಲ್ಲಿ ತಮ್ಮ ಹೊಸ ಅಭಿಲಾಷೆ ಮತ್ತು ಆಕಾಂಕ್ಷೆಯನ್ನು ಬಹಿರಂಗೊಳಿಸಿದ್ದಾರೆ.
ಜಪಾನ್ ಮೂಲದ ಸಾಫ್ಟ್ಬ್ಯಾಂಕ್ ಗ್ರೂಪ್ (Soft Bank) ಬೆಂಬಲಿತ ಓಲಾ ಎಲೆಕ್ಟ್ರಿಕ್ (Ola Electric) 2024ರ ವೇಳೆಗೆ ಭಾರತದಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋ ಮೀಟರ್ ಪ್ರಯಾಣಿಸುವ ಕಾರನ್ನು ಉತ್ಪಾದಿಸುವ ಘೋಷಣೆ ಮಾಡಿದ್ದಾರೆ.
ಓಲಾ ಎಲೆಕ್ಟ್ರಿಕ್ ಕಾರು, ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola Scooter) ಮತ್ತು ಇಥಿಯಂ ಬ್ಯಾಟರಿಗಳನ್ನು ಉತ್ಪಾದಿಸುವ ಅತೀ ದೊಡ್ಡ ಉತ್ಪಾದಕ ಸ್ಥಾವರನ್ನು ಸ್ಥಾಪಿಸಲಿದೆ. ಈ ಮೂಲಕ ಈಗಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸ್ಥಾವರ (Ola Plant) ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಲಿದೆ.
ಓಲಾ ಮಾಲೀಕರ ಹೊಸ ಲೆಕ್ಕಾಚಾರಗಳು:
– ತಮಿಳುನಾಡು (Tamilnadu) ರಾಜ್ಯದ ಪೊಚಾಂಪಲ್ಲಿಯಲ್ಲಿರುವ ಓಲಾ ಎಲೆಕ್ಟ್ರಿಕ್ ಫ್ಯೂಚರ್ ಫ್ಯಾಕ್ಟರಿ ವಿಸ್ತರಣೆ
– ಹೊಸದಾಗಿ 100 ಎಕರೆಯಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಉತ್ಪಾದನಾ ಸ್ಥಾವರ
– 200 ಎಕರೆಯಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಸ್ಥಾವರ
– 40 ಎಕರೆಯಲ್ಲಿ ಹೊಸದಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಸ್ಥಾವರ ಸ್ಥಾಪನೆ
ಉತ್ಪಾದನೆ ಎಷ್ಟು..?
ಮೂರು ಸ್ಥಾವರಗಳಲ್ಲಿ ಓಲಾ ಮಾಲೀಕ ಭವೀಶ್ ಅಗರ್ವಾಲ್ ಹೊಸ ಗುರಿ ಘೋಷಿಸಿದ್ದಾರೆ.
– ಓಲಾ ಸ್ಕೂಟರ್ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 1 ಕೋಟಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ
– ಓಲಾ ಕಾರು ಫ್ಯಾಕ್ಟರಿಯಲ್ಲಿ ವರ್ಷಕ್ಕೆ 10 ಲಕ್ಷ ಎಲೆಕ್ಟ್ರಿಕ್ ಕಾರು ಉತ್ಪಾದನೆ
– ಓಲಾ ಗಿಗಾ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 100 ಗಿಗಾ ವ್ಯಾಟ್ ಬ್ಯಾಟರಿಗಳ ಉತ್ಪಾದನೆ
ಓಲಾ ಎಲೆಕ್ಟ್ರಿಕ್ ಕಾರು ವಿಶೇಷತೆ ಏನಿರಲಿದೆ..?
– ಒಂದು ಬಾರಿ ಚಾರ್ಜ್ ಆದರೆ 500 ಕಿಲೋ ಮೀಟರ್ ದೂರ ಕ್ರಮಿಸಬಹುದು.
– ಕೇವಲ 4 ಸೆಕೆಂಡ್ನಲ್ಲಿ ಗಂಟೆಗೆ 100 ಕಿಲೋ ಮೀಟರ್ ವೇಗವನ್ನು ಪಡೆದುಕೊಳ್ಳಲಿದೆ.
– ಭಾರತದಲ್ಲಿ ಇದುವರೆಗೆ ಉತ್ಪಾದಿಸಲಾದ ಕಾರುಗಳಲ್ಲೇ ಅತ್ಯಂತ ಸ್ಪೋರ್ಟಿ ಕಾರು ಇದಾಗಿರಲಿದೆ
– ಓಲಾ ಎಲೆಕ್ಟ್ರಿಕ್ ಕಾರಿನ ರೂಫ್ ಟಾಪ್ ಸಂಪೂರ್ಣ ಗಾಜು ಮಯವಾಗಿರಲಿದೆ
– ಕೀ ಲೆಸ್ ಮತ್ತು ಹ್ಯಾಂಡ್ಲೆಸ್ ಬಾಗಿಲುಗಳಿರಲಿವೆ
– ಒಂದು ಕಿಟಕಿಯ ಕಡೆ ಕಂಪ್ಯೂಟರ್ ಕೂಡಾ ಇರಲಿದೆ
– ಓಲಾ ಎಲೆಕ್ಟ್ರಿಕ್ ಕಾರು ತನ್ನದೇ MoveOS ಸಾಫ್ಟ್ವೇರ್ ಕೂಡಾ ಇರಲಿದೆ.
ADVERTISEMENT
ADVERTISEMENT