ತೈಲ ಬೆಲೆ ಏರಿಕೆ ನಡುವೆ ಆಟೋಮೊಬೈಲ್ ರಂಗದಲ್ಲಿ ಹೊಸ ಬೆಳಕಿನಂತೆ ಕಂಡಿದ್ದ ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಮೇಲೆ ತಾಂತ್ರಿ ದೋಷಗಳೇ ಕಾರ್ಮೋಡದ ರೀತಿ ಆವರಿಸುತ್ತಿವೆ.
ಸರಣಿ ಬೆಂಕಿ ಅನಾಹುತಗಳು ಸಂಭವಿಸುತ್ತಿರುವ ಸಂದರ್ಭದಲ್ಲೇ ಓಲಾ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬ್ರೇಕ್ ಫೇಲ್ ಆಗಿ, ಇಡೀ ವಾಹನದ ಶೇಪ್ ಚೇಂಜ್ ಆಗಿರುವ ಘಟನೆ ಮಹಾರಾಷ್ಟ್ರದ ಔರಂಗಜೇಬ್ ನಲ್ಲಿ ನಡೆದಿವೆ.

ಓಲಾ ಸ್ಕೂಟರ್ನಲ್ಲಿ ಸವಾರ ಪಯಣಿಸುತ್ತಿದ್ದ ಸಂದರ್ಭದಲ್ಲೇ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಮುಂದೆ ಹೋಗುತ್ತಿದ್ದ ವಾಹನಕ್ಕೆ ಓಲಾ ಸ್ಕೂಟರ್ ಟಚ್ ಆಗಿದೆ. ಕೂಡಲೇ ಸ್ಕೂಟರ್ ಮುಂಭಾಗದ ಟೈರ್ ಮತ್ತು ಬಿಡಿಭಾಗಗಳು ಕಳಚಿಬಿದ್ದಿವೆ. ಅದೃಷ್ಟವಶಾತ್ ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾನೆ.
ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.