ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರಾಖಂಡ್ ನ ವೃದ್ಧೆಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ.
ರಾಹುಲ್ ಗಾಂಧಿಯವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ಡೆಹ್ರಾಡೂನ್ನ ನೆಹರು ಕಾಲೋನಿಯ ದಲನ್ವಾಲಾ ನಿವಾಸಿ ವೃದ್ಧೆ ಪುಷ್ಪಾ ಮುಂಜಿಯಾಲ್ (78) ಎಂಬುವರು ಜಿಲ್ಲಾ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಗಾಂಧಿ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದೆ. ದೇಶಕ್ಕಾಗಿ ಅವರ ಮೌಲ್ಯಗಳು ಮತ್ತು ಆಲೋಚನೆಗಳಿಂದ ಪ್ರಭಾವಿತಳಾಗಿದ್ದೇನೆ ಎಂದಿದ್ದಾರೆ. ಅದಕ್ಕಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಪುಪ್ಪಾ ಹೇಳಿದ್ದಾರೆ.
ತಮ್ಮ ಆಸ್ತಿಯ ವಿವರವನ್ನು ನ್ಯಾಯಾಲಯಕ್ಕೆ ನೀಡಿರುವ ಅವರು, ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ. ಅಜ್ಜಿಯ ಬಳಿ 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸುಮಾರು 10 ಪವನ ಬಂಗಾರವಿದೆ, ಅದನ್ನು ರಾಹುಲ್ ಗಾಂಧಿಯವರ ಹೆಸರಿಗೆ ವರ್ಗಾಯಿಸಿದ್ದಾರೆ.
बिकी हुई मीडिया संस्थानों के दौर में कांग्रेस के अस्तित्व को भरोसे का बल देती पुष्पा मुंजियाल जी। pic.twitter.com/3bKMIUYX32
— Madhya Pradesh Congress Sevadal (@SevadalMP) April 4, 2022
ಮುಂಜಿಯಾಲ್ ತನ್ನ ಆಸ್ತಿಯನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ನಾಯಕ ಪ್ರೀತಮ್ ಸಿಂಗ್, ಆಕೆಯ ಈ ನಿರ್ಧಾರ ಗಾಂಧಿ ಕುಟುಂಬದ ಬಗ್ಗೆ ಅವರ ಪ್ರೀತಿಯನ್ನು ತೋರಿಸುತ್ತದೆ. ಇಂದಿನ ಕಾಲದಲ್ಲಿ, ಜನರು ಆಸ್ತಿಗಾಗಿ ಬಡಿದಾಡುತ್ತಿರುವ ಸಮಯದಲ್ಲಿ ಪುಷ್ಪಾ ಜೀ ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪುಷ್ಪಾ ಮುಂಜಿಯಾಲ್ ಅವರು ತಮ್ಮ ಆಸ್ತಿಯ ದಾಖಲೆ ಪತ್ರವನ್ನು ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ವರ್ಗಾಯಿಸಿದರು. ರಾಹುಲ್ ಗಾಂಧಿಗೆ ಹಸ್ತಾಂತರಿಸಿದ ಆಸ್ತಿ ಡೆಹ್ರಾಡೂನ್ನ ಐಷಾರಾಮಿ ಸ್ಥಳದಲ್ಲಿದ್ದು ಹೆಚ್ಚಿನ ಮೌಲ್ಯ ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
https://youtu.be/4Yl2BhFmhuc