ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್ನಲ್ಲಿ ಓಣಂ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಹರಾಜಿನಲ್ಲಿ ಒಂದು ಕುಂಬಳಕಾಯಿ ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಅಚ್ಚರಿ ಮೂಡಿಸಿದೆ.
ಕೇರಳದಲ್ಲಿ ಓಣಂ ಹಬ್ಬವನ್ನು ಎಲ್ಲ ಧರ್ಮೀಯರೂ ಸೇರಿ ಆಚರಿಸುತ್ತಾರೆ. ಈ ವರ್ಷ ಓಣಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿಗೆ ಇಟ್ಟಿದ್ದರು. ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಸಂಘಟಕರು ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗಳಿಗೆ ದಾಖಲೆ ಮೊತ್ತಕ್ಕೆ ಮಾರಾಟವಾಯಿತು.
ಸಾಮಾನ್ಯವಾಗಿ ಅಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದವು 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿತ್ತು. ಈ ಸಲ ಐದು ಕೇಜಿ ತೂಕದ ಕುಂಬಳಕಾಯಿ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಹಬ್ಬದಂದು ಖರೀದಿ ಮಾಡುವ ಯಾವುದೇ ವಸ್ತುಗಳು ಶುಭದ ಸಂಕೇತ ಎಂಬ ಕಾರಣದಿಂದ ವಸ್ತುಗಳ ಹರಾಜಿನಲ್ಲಿ ದುಬಾರಿ ಬೆಲೆಗೆ ಖರೀದಿಯಾಗುತ್ತದೆ. ಈ ವೇಳೆ ಬಿಡ್ಡಿಂಗ್ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು. ಇದನ್ನೂ ಓದಿ : Tomato flu; ಕೇರಳದಲ್ಲಿ ಟೊಮ್ಯಾಟೋ ಫ್ಲೂ.. ವೈರಸ್ ಲಕ್ಷಣಗಳು ಏನು?