ಸ್ಟಾರ್ ನಿರ್ದೇಶಕ ರಾಜಮೌಳಿ.. ಇಂದು ದೊಡ್ಡ ಹೆಸರು. ಅವರ ಒಂದೊಂದು ಚಿತ್ರವೂ ಅದ್ಭುತ.. ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ರೇಟ್ ಇರುವ ಏಕೈಕ ನಿರ್ದೇಶಕ. ರಾಜಮೌಳಿಯ RRR ಚಿತ್ರದ ಮೇಕಿಂಗ್ ಮಹಾ ಅದ್ಭುತ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾಗೆ ರಾಜಮೌಳಿ ರೆಮುನರೇಷನ್ ಏನಿಲ್ಲ ಎಂದರೂ 200ಕೋಟಿಗೂ ಹೆಚ್ಚು ಎಂಬುದು ಟಾಕ್. ಜೊತೆಗೆ ಸಿನಿಮಾದ ಕಲೆಕ್ಷನ್ ಮೇಲೆ ಹೆಚ್ಚುವರಿ ಪರ್ಸಂಟೇಜ್ ಇದ್ದೇ ಇರುತ್ತದೆ. ಇಂಥಾ ರಾಜಮೌಳಿ ಒಂದು ಹಂತದಲ್ಲಿ ಕೇವಲ 213ರೂಪಾಯಿ ಇಲ್ಲದೇ ಒದ್ದಾಡಿ ಹೋಗಿದ್ದರು.

ಅದು 1996-97. ರಾಜಮೌಳಿ ಇನ್ನೂ ನಿರ್ದೇಶಕರಾಗಿರಲಿಲ್ಲ. ಅಂದು ರಾಜಮೌಳಿ ಅವರ ಅಪ್ಪ ವಿಜಯೇಂದ್ರ ಪ್ರಸಾದ್ ಅರ್ಧಾ0ಗಿ ಸಿನಿಮಾಗೆ ಇರುವದೆಲ್ಲಾ ಹಾಕಿ ಕೈ ಸುಟ್ಟುಕೊಂಡಿದ್ದರು. ತುಂಬು ಕುಟುಂಬ ಇರುವ ಮನೆಯಲ್ಲಿ ಜೀವನ ಕಷ್ಟವಾಗಿ ಹೋಗಿತ್ತು.

ಸಿನೆಮಾ ರಿಲೀಸ್ ಗೆ ಮುನ್ನಾ ಇನ್ಸ್ಟಾಲ್ ಮೆಂಟ್ ನಲ್ಲಿ ಖರೀದಿಸಿದ್ದ ಕಲರ್ ಟಿವಿಗೆ ಫೆಬ್ರವರಿ ತಿಂಗಳ ಕಂತು 213 ರೂಪಾಯಿ ಕಟ್ಟಲು ಹಣ ಇರಲಿಲ್ಲ. ಕಂತು ಕಟ್ಟಿಲ್ಲ ಅಂದರೆ ಅಂಗಡಿಯವನು ಬಂದು ಟಿವಿ ಹೊತ್ತೋಯುತ್ತಾನೆ. ಕುಟುಂಬದ ಮರ್ಯಾದೆ ಹೋಗುತ್ತೆ ಎಂದು ರಾಜಮೌಳಿ, ಕೀರವಾಣಿ, ವಿಜಯೇಂದ್ರ ಪ್ರಸಾದ್ ಸೇರಿ ಕುಟುಂಬಸ್ಥರೆಲ್ಲ ತಲ್ಲಣಿಸಿ ಹೋಗಿದ್ದರು.
ಆದರೆ, ಅದೃಷ್ಟವಶಾತ್ ಜನವರಿಗೆ ಕಂತು ಪೂರ್ಣಗೊಂಡಿತ್ತು. ಈ ವಿಚಾರ ತಿಳಿದ ರಾಜಮೌಳಿ ಕುಟುಂಬಸ್ಥರೆಲ್ಲಾ ನಿಟ್ಟುಸಿರು ಬಿಟ್ಟಿದ್ದರು.

ಈ ವಿಚಾರವನ್ನು ರಾಜಮೌಳಿ ಅವರು ಆಹಾ OTT ಯಲ್ಲಿ ಪ್ರಸಾರ ಆಗುವ, ಬಾಲಕೃಷ್ಣ ಅವರು ನಡೆಸಿಕೊಡುವಂತಹ Unstoppable ಕಾರ್ಯಕ್ರಮದಲ್ಲಿ ಹೇಳಿಕೊಂಡು ಭಾವುಕಾರಾಗಿದ್ದಾರೆ. ಆದರೆ, ಆತ್ಮವಿಶ್ವಾಸವನ್ನು ಎಂದಿಗೂ ಕಳೆದುಕೊಂಡಿರಲಿಲ್ಲ ಎಂದು ರಾಜಮೌಳಿ ಸ್ಪಷ್ಟವಾಗಿ ತಿಳಿಸಿದ್ದಾರೆ.