ಅದ್ಯಾವ ಕಾರಣಕ್ಕೋ ಏನೋ ಒಂದು ದಿನದ ಮಟ್ಟಿಗೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನ ತೈಲ ಕಂಪನಿಗಳು ಹೆಚ್ಚಳ ಮಾಡಿರಲಿಲ್ಲ. ಇದೀಗ ಮತ್ತೆ ಸಾಮಾನ್ಯ ಜನತೆಗೆ ತೈಲ ಬರೆ ಬಿದ್ದಿದೆ.
ಇಂದು ಪೆಟ್ರೋಲ್ ಬೆಲೆಯಲ್ಲಿ 85 ಪೈಸೆ ಹೆಚ್ಚಳವಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.11 ರೂಪಾಯಿ ಆಗಿದೆ.
ಗುರುವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 102.26 ರೂಪಾಯಿ ಇತ್ತು.
ಡೀಸೆಲ್ ಬೆಲೆಯಲ್ಲಿಯೂ 79ಪೈಸೆ ಏರಿಕೆಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 87.37 ರೂಪಾಯಿ ಆಗಿದೆ.
ಗುರುವಾರ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 86.58 ರೂಪಾಯಿ ಇತ್ತು.
ಮೂರು ದಿನದಲ್ಲಿ ಪೆಟ್ರೋಲ್ 2.59ರೂಪಾಯಿ ಹೆಚ್ಚಾಗಿದ್ದರೆ, ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 2.43ರೂಪಾಯಿ ಹೆಚ್ಚಳವಾಗಿದೆ.
ಜನ ಸಾಮಾನ್ಯ ಬೆಲೆ ಏರಿಕೆಯಿಂದ ತತ್ತರಿಸಿದ್ದಾನೆ.