ಬಿಜೆಪಿ ಸೋಲಿಸಲು ಜೆಡಿಎಸ್ ಜೊತೆಗೆ ಕಾಂಗ್ರೆಸ್ ಕೈ ಜೋಡಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಟ್ಟ ಓಪನ್ ಆಪರ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
`ಅವರು (ಕುಮಾರಸ್ವಾಮಿ) ಸ್ವತಂತ್ರರಿದ್ದಾರೆ. ಆದರೆ ನಾನೊಬ್ಬ ಪಕ್ಷದ ಕಾರ್ಯಕರ್ತ. ನಾನು ಮಾತಾಡ್ಬೇಕಾದ್ರೆ ಪಕ್ಷದ ನಾಯಕರು, ವರಿಷ್ಠರು ಎಲ್ಲ ಸೇರಿ ಮಾತಾಡ್ಬೇಕಾಗುತ್ತದೆ.
`ಈಗ ಕುಮಾರಣ್ಣನವರು ಸರ್ಕಾರ ಹೋಗಿದ್ದು, ತಾನು ಹೊರಗಡೆ ದೇಶದಲ್ಲಿ ಉಳಿದುಕೊಂಡಿದ್ದು, ಇಬ್ರಾಹಿಂ ಮಾತಾಡಿದ್ದು ನಿಮ್ಮ ಹತ್ರನೂ ಇದೆ, ನಮ್ಮ ಕಣ್ಣುಗಳಲ್ಲೂ ದೃಶ್ಯ ಇದೆ. ನಾನೇನು ಅದನ್ನು ವ್ಯಾಖ್ಯಾನ ಮಾಡಲು ಹೋಗಲ್ಲ. ರಾಜಕೀಯದಲ್ಲಿ ಏನು ಶಾಶ್ವತನೂ ಇಲ್ಲ’
`ಕಾಂಗ್ರೆಸ್ ಅಂದ್ರೆ ನಾನೊಬ್ಬ ಅಲ್ಲ, ಇಡೀ ನಮ್ಮ ನಾಯಕರೆಲ್ಲ ಚರ್ಚೆ ಮಾಡ್ಬೇಕು. ಅವರೂ (ಕುಮಾರಸ್ವಾಮಿ) ಚರ್ಚೆ ಮಾಡಿದ್ದಾರೆ. ನಿನ್ನೆ ಸುರ್ಜೆವಾಲಾ ಅವರು ಮನವಿ ಮಾಡ್ಕೊಂಡಿದ್ದಾರೆ. ಸುರ್ಜೆವಾಲಾ ಮನವಿ ಮಾಡ್ಕೊಂಡಿದ್ದಾರೆ ಎಂದರೆ ವರಿಷ್ಠರು ಮನವಿ ಮಾಡ್ಕೊಂಡ ಹಾಗೆ. ಅವರು (ಕುಮಾರಸ್ವಾಮಿ) ಏನೇನೂ ಪ್ರಯತ್ನ ಮಾಡ್ತಿದ್ದಾರೆ. ಇದು ಎಲೆಕ್ಷನ್ ಇಯರ್. ನಮ್ಮ ಕಡೆಯಿಂದ ಏನು ಸಹಾಯ ಮಾಡ್ಬೇಕು, ಹಲವು ಭಿನ್ನಾಭಿಪ್ರಾಯ ಮರೆತು ಪಕ್ಷದ ಹಿತದೃಷ್ಟಿಯಿಂದ ತಲೆಬಾಗಿದ್ದೇವೆ. ಮಿಕ್ಕಿದ್ದನ್ನು ಪಾರ್ಟಿಗೆ ಬಿಡ್ತೇವೆ. ನಾನು ಪಕ್ಷದ ಅಧ್ಯಕ್ಷ ಇರಬಹುದು, ಆದ್ರೆ ನನ್ನ ವೈಯಕ್ತಿಕವಾದ ತೀರ್ಮಾನ ನಾನು ಯಾವುದು ಮಾಡಲ್ಲ’
ಎಂದು ಬೆಂಗಳೂರಲ್ಲಿ ಡಿಕೆಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಮೈಸೂರಲ್ಲಿ ಮಾತಾಡಿದ್ದ ಕುಮಾರಸ್ವಾಮಿ `ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಮಾತಾಡಿದ್ದಾಗಿಯೂ’ `ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೊಸ ರಾಜಕಾರಣಕ್ಕೆ ಕಾಂಗ್ರೆಸ್ಗೆ ಓಪನ್ ಆಫರ್ ಕೊಡ್ತಿರುವುದಾಗಿಯೂ’ `ರಾಜ್ಯಸಭೆಯಲ್ಲಿ ಮೈತ್ರಿಗೆ ಸಿದ್ದರಾಮಯ್ಯ ಬಿಟ್ಟು ಉಳಿದೆಲ್ಲರ ಒಪ್ಪಿಗೆ ಇದೆ’ ಎಂದೂ ಹೇಳಿದ್ದರು.