ಗೋವಾದಲ್ಲಿ ಆಪರೇಷನ್ ಕಮಲ ಮುಂದುವರಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸುಳಿವು ನೀಡಿದ್ದಾರೆ.
ಬಿಜೆಪಿ ಜೊತೆಗೆ ಐವರು ಶಾಸಕರು ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಅನುಮತಿ ಕೊಟ್ಟರೆ ಆಗ ರಾಜ್ಯದಲ್ಲಿ ನಮ್ಮ ಬಲ 20ರಿಂದ 25ಕ್ಕೆ ಹೆಚ್ಚಳ ಆಗುತ್ತದೆ.
ಎಂದು ಗೋವಾ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.
ನಾವು 20 ಶಾಸಕರಿದ್ದೇವೆ. ನಮಗೆ ಐವರು ಶಾಸಕರ ಬೆಂಬಲವೂ ಸಿಕ್ಕಿದೆ. ಚಿಂತೆ ಬೇಡ. ಭವಿಷ್ಯದಲ್ಲಿ ನಾವು 30 ದಾಟಲಿದ್ದೇವೆ. ಇಲ್ಲಿಯವರೆಗೆ ಪಕ್ಷ ಅನುಮತಿ ನೀಡಿಲ್ಲ. ಹೀಗಾಗಿ ನಾವು 25 ಮಂದಿ ಇದ್ದೇವೆ, ಅನುಮತಿ ಸಿಕ್ಕ ಬಳಿಕ ನಾವು 30 ತಲುಪತ್ತೇವೆ. ಆದು ಆಗಲಿದೆ
ಎಂದು ಸಿ ಟಿ ರವಿ ಅವರು ಹೇಳಿದ್ದಾರೆ.
40 ಶಾಸಕರ ವಿಧಾನಸಭೆಯಲ್ಲಿ ಬಿಜೆಪಿ – 20, ಕಾಂಗ್ರೆಸ್-11, ಗೋವಾ ಫಾವರ್ಡ್ ಪಾರ್ಟಿ -1, ಆಮ್ ಆದ್ಮಿ ಪಾರ್ಟಿ -2, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ -2, ಆರ್ಜಿಪಿ -1, ಸ್ವತಂತ್ರ – ಮೂವರು ಶಾಸಕರಿದ್ದಾರೆ.
ತೃಣಮೂಲ ಕಾಂಗ್ರೆಸ್ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿತ್ತು. ಮೂವರು ಸ್ವತಂತ್ರ ಶಾಸಕರೂ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 20 ಸ್ಥಾನ ಗೆದ್ದಿದ್ದ ಬಿಜೆಪಿ ಸರ್ಕಾರದ ಬಹುಮತ 25ಕ್ಕೆ ಏರಿತ್ತು.
ಉಳಿದ 15 ಶಾಸಕರ ಪೈಕಿ ಕಾಂಗ್ರೆಸ್-11, ಜಿಎಫ್ಪಿ-1 ಮತ್ತು ಆಮ್ ಆದ್ಮಿ ಪಾರ್ಟಿಯ ಇಬ್ಬರು ಶಾಸಕರಿದ್ದಾರೆ. ಇವರಲ್ಲಿ ಯಾರು ಆಪರೇಷನ್ ಕಮಲಕ್ಕೆ ಒಳಗಾಗ್ತಾರೆ ಎಂಬುದೇ ಕುತೂಹಲ.
2017ರ ವಿಧಾನಸಭಾ ಚುನಾವಣೆಯಲ್ಲಿ 17 ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ 2021ರ ಡಿಸೆಂಬರ್ ವೇಳೆಗೆ ಅಂದರೆ ವಿಧಾನಸಭಾ ಚುನಾವಣೆಗೂ ಎರಡು ತಿಂಗಳು ಮುಂಚೆ 3ಕ್ಕೆ ಕುಸಿದಿತ್ತು. ಅಂದರೆ 14 ಶಾಸಕರು ಬಿಜೆಪಿಗೆ ವಲಸೆ ಹೋಗಿದ್ದರು.