ಗೆಲುವಿನ ಆರಂಭದ ಸಂಭ್ರಮಾಚಾರಣೆಯಲ್ಲಿದ್ದ ಕಾಂಗ್ರೆಸ್ಗೆ ಹರಿಯಾಣ ರಾಜ್ಯಸಭಾ ಚುನಾವಣೆಯಲ್ಲಿ ಮುಖಭಂಗವಾಗಿದೆ. `ಹೊರಗಿನವರು’ ಎಂಬ ಅಪವಾದದೊಂದಿಗೆ ಸ್ಪರ್ಧಿಸಿದ್ದ ದೆಹಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಜಯ್ ಮಕೇನ್ಗೆ ಸೋಲಾಗಿದೆ. ಈ ಮೂಲಕ ಹರಿಯಾಣದಲ್ಲಿ ಕಾಂಗ್ರೆಸ್ ಒಂದೂ ಸೀಟನ್ನು ಗೆದ್ದಿಲ್ಲ.
ಇಂಗ್ಲೀಷ್ ಸುದ್ದಿವಾಹಿನಿ ನ್ಯೂಸ್ ಎಕ್ಸ್ ಮತ್ತು ದಿ ಸಂಡೇ ಗಾರ್ಡಿಯನ್ ಪತ್ರಿಕೆಯ ಮಾಲೀಕ ಕಾರ್ತಿಕೇಯ ಶರ್ಮಾ ಗೆಲುವು ಸಾಧಿಸಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ.
ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣನ್ ಲಾಲ್ ಪನ್ವಾರ್ ಗೆದ್ದಿದ್ದಾರೆ.
ಹರಿಯಾಣ ಕಾಂಗ್ರೆಸ್ನ ಓರ್ವ ಶಾಸಕ ಅಡ್ಡ ಮತದಾನ ಮಾಡಿದ್ದು ಮತ್ತು ಓರ್ವ ಕಾಂಗ್ರೆಸ್ ಶಾಸಕ ಮತ ಅಸಿಂಧು ಆಗಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.
ಕಾಂಗ್ರೆಸ್, ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಸಲ್ಲಿಸಿದ್ದ ಆಕ್ಷೇಪಗಳ ಹಿನ್ನೆಲೆಯಲ್ಲಿ ಮತ ಎಣಿಕೆ ವಿಳಂಬವಾಗಿ ಮಧ್ಯರಾತ್ರಿ 2 ಗಂಟೆಯ ವೇಳೆ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿತು.
ಬಿಜೆಪಿಯ ಪನ್ವಾರ್ 36 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದರೆ, ಕಾರ್ತಿಕೇಯ ಶರ್ಮಾ ಮೊದಲ ಪ್ರಾಶಸ್ತö್ಯದ 23 ಮತಗಳು ಮತ್ತು ಬಿಜೆಪಿ ಕಡೆಯಿಂದ ವರ್ಗಾಯಿಸಲಾದ 6.6ರಷ್ಟು ಮತಗಳನ್ನು ಪಡೆದರು.
ಕಾಂಗ್ರೆಸ್ನ ಅಜಯ್ ಮಕೇನ್ 29 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದರೆ, ಎರಡನೇ ಪ್ರಾಶಸ್ತö್ಯದ ಮತಗಳು ಸಿಗಲಿಲ್ಲ. ಈ ಮೂಲಕ ಕೂದಲೆಳೆಯ ಅಂತರದಲ್ಲಿ ಕಾಂಗ್ರೆಸ್ಗೆ ಸೋಲಾಯಿತು.
ಒಂದು ವೇಳೆ ಕಾಂಗ್ರೆಸ್ 1 ಮತ ಅಸಿಂಧುಗೊಳ್ಳದಿದ್ದರೇ ಅಜಯ್ ಮಕೇನ್ ಗೆಲ್ಲುತ್ತಿದ್ದರು.