ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ ಮುಸ್ಲಿಂ ಮತ ಪ್ರಾಬಲ್ಯ ಇರುವ ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಎಂಐಎಂಗೆ ಜೆಡಿಎಸ್ ಬಿಟ್ಟು ಕೊಡುವ ಸಾಧ್ಯತೆ ಇದೆ.
ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್ಎಸ್ ಪಕ್ಷದ ನಾಯಕರೂ ಆಗಿರುವ ಕೆ ಚಂದ್ರಶೇಖರ್ ರಾವ್ ಅವರ ಸಲಹೆ ಮೇರೆಗೆ ಕುಮಾರಸ್ವಾಮಿ ಅವರು ಓವೈಸಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ.
ತೆಲಂಗಾಣದಲ್ಲಿ ಓವೈಸಿ ಮತ್ತು ಕೆಸಿಆರ್ ಪಕ್ಷ ಹೊಂದಾಣಿಕೆ ರಾಜಕಾರಣದಲ್ಲಿದೆ.
ಜೆಡಿಎಸ್ ಜೊತೆಗೆ ಮೈತ್ರಿಗೆ ಮಾತುಕತೆ ನಡೆಸಲಾಗಿದೆ ಎಂದು ಓವೈಸಿ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಜೊತೆಗೆ ಮಾತುಕತೆ ನಡೆದಿದ್ದು, ಜೆಡಿಎಸ್ನಿಂದ ಇನ್ನೂ ಪ್ರತಿಕ್ರಿಯೆ ಬರುವುದು ಬಾಕಿ ಇದೆ ಎಂದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಓವೈಸಿ ಪಕ್ಷ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಬೆಳಗಾವಿ ಉತ್ತರ, ಬಸನವಬಾಗೇವಾಡಿ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಗಳಿಗೆ ಈಗಾಗಲೇ ಎಂಐಎಂ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಓವೈಸಿ ಮತ್ತು ಕುಮಾರಸ್ವಾಮಿ ಮೈತ್ರಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಮಾರಕ ಆಗಬಹುದು. ಮುಸ್ಲಿಂ ಮತಗಳ ವಿಭಜನೆ ಮೂಲಕ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಕೈಯಲ್ಲಿರುವ ಪ್ರಮುಖ ಅಸ್ತ್ರಗಳಲ್ಲಿ ಇದೂ ಒಂದು ಎಂದು ಭಾವಿಸಲಾಗಿದೆ.
ADVERTISEMENT
ADVERTISEMENT