ದೇಶದಲ್ಲಿ ಮುಸ್ಲಿಂರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಎಐಎಂಐಎಂ ಪಕ್ಷದ ನೇತಾರ ಓವೈಸಿಯವರು ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ. ಸದಾ ವಿವಾದಾತ್ಮಕ ಮಾತುಗಳಿಂದ ಸುದ್ದಿಯಲ್ಲಿರುತ್ತಿದ್ದ ಓವೈಸಿಯವರು ಇದೀಗ ‘ಕಣ್ಣೀರ ರಾಜಕಾರಣ’ಕ್ಕೆ ಎಂಟ್ರಿ ಪಡೆದಿದ್ದಾರೆ.
ಹೈದರಾಬಾದ್ನಲ್ಲಿ ನಮಾಜ್ ಮುಗಿಸಿ ಸಮುದಾಯ ಬಾಂಧವರೊಂದಿಗೆ ಮಾತನಾಡುವ ವೇಳೆ ಅವರು ಕಣ್ಣಿರು ಹಾಕಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಓವೈಸಿಯವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಎರಡು ಘಟನೆಗಳಾದ ಮಧ್ಯಪ್ರದೇಶದ ಖಾರ್ಗೋನ್ ಹಿಂಸಾಚಾರ ಹಾಗೂ ದೆಹಲಿಯ ಜಹಂಗೀರ್ ಪುರಿ ಘಟನೆಯನ್ನು ಓವೈಸಿ ಮೆಲುಕು ಹಾಕಿಕೊಂಡಿದ್ದಾರೆ. ಈ ಘಟನೆಗಳನ್ನು ನೆನಪು ಮಾಡುತ್ತಾ ಓವೈಸಿ ಕಣ್ಣೀರು ಹಾಕಿದ್ದಾರೆ.
ಖಾರ್ಗೋನ್ ಮತ್ತು ಜಹಂಗೀರ್ ಪುರಿಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ. ಅವರ ಮನೆಗಳನ್ನು ಕೆಡವಲಾಗಿದೆ ಎಂದು ಓವೈಸಿ ತಮ್ಮ ಭಾಷಣದಲ್ಲಿ ಹೇಳುತ್ತಾ ಕಣ್ಣಿರು ಹಾಕಿದ್ದಾರೆ. ಆದರೂ ಭರವಸೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ಅವರು ಇದೇ ವೇಳೆ ಸಮುದಾಯ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.