ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ EVM (ಎಲೆಕ್ಟಾçನಿಕ್ ವೋಟಿಂಗ್ ಮೆಷಿನ್) ಬಳಕೆಗೆ ನಿಷೇಧ ಹೇರುವ ಮಸೂದೆಯನ್ನು ಅಲ್ಲಿನ ಸಂಸತ್ತು ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದೆ.
ಅಲ್ಲದೇ ಅನಿವಾಸಿ ಪಾಕಿಸ್ತಾನಿಯರಿಗೆ ದೇಶದ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನೂ ಈ ವಿಧೇಯಕದ ಮೂಲಕ ನಿಷೇಧಿಸಲಾಗಿದೆ.
2021ರಲ್ಲಿ ಚುನಾವಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ಹಿಂದಿನ ಇಮ್ರಾನ್ ಖಾನ್ ಸರ್ಕಾರ ಚುನಾವಣೆಯಲ್ಲಿ ಇವಿಎಂ ಬಳಕೆಗೆ ಅವಕಾಶ ಮತ್ತು ಅನಿವಾಸಿ ಪಾಕಿಸ್ತಾನಿಯರಿಗೆ ಮತದಾನದ ಹಕ್ಕನ್ನು ನೀಡಿತ್ತು.
2021ರಲ್ಲೇ ಪಾಕಿಸ್ತಾನದ ಚುನಾವಣಾ ಆಯೋಗ EVM ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. `ಇವಿಎಂನ್ನು ಸುಲಭವಾಗಿ ತಿರುಚಬಹುದು ಮತ್ತು ಅದರ ಸಾಫ್ಟ್ ವೇರ್ನ್ನೂ ಸುಲಭವಾಗಿ ತಿರುಚಬಹುದು’ ಎಂದು ಎಚ್ಚರಿಸಿತ್ತು. `ಇವಿಎಂ ಯಂತ್ರಗಳು ಪ್ರಾಮಾಣಿಕವಾಗಿ ಇರುತ್ತವೆ ಎಂದು ನೋಡಿಕೊಳ್ಳುವುದು ಅಸಾಧ್ಯ’ ಎಂದೂ ಆಯೋಗ ಹೇಳಿತ್ತು.