ಸಂಸತ್ ನಲ್ಲಿ ದುಷ್ಕರ್ಮಿಗಳ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ವಿಚಾರಗಳನ್ನು ಆರೋಪಿಗಳಿಂದ ತನಿಖಾಧಿಕಾರಿಗಳು ಬಾಯಿಬಿಡಿಸುತ್ತಿದ್ದಾರೆ.
ಕಲಾಪ ನಡೆಯುತ್ತಿದ್ದ ವೇಳೆ ಹೊಗೆ ದಾಳಿ ನಡೆಸಿದ ಆರೋಪಿ ಸಾಗರ್ ಶರ್ಮಾ ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳಲು ತೀರ್ಮಾನಿದ್ದ ಅಂತ ಖುದ್ದು ಆತನೇ ಬಾಯ್ಬಿಟ್ಟಿದ್ದಾನೆ.
ದಾಳಿ ನಡೆಸಲು ಯೋಜಿಸುವ ಮುನ್ನವೇ ತಾನು ಬೆಂಕಿ ಹಚ್ಚಿಕೊಳ್ಳಲು ಪ್ಲ್ಯಾನ್ ಮಾಡಿ ಬಳಿಕ ಆ ಪ್ಲ್ಯಾನ್ ಕೈಬಿಟ್ಟಿದ್ದಾಗಿ ತನಿಖಾಧಿಕಾರಿಗಳ ಬಳಿ ಆರೋಪಿ ಸಾಗರ್ ಶರ್ಮಾ ತಿಳಿಸಿದ್ದಾನೆ.
ಇನ್ನು ಹೊಗೆ ದಾಳಿಗಾಗಿ ಆರೋಪಿಗಳಾದ ಮನೋರಂಜನ್ ಮತ್ತು ಸಾಗರ್ ಶರ್ಮಾ 7 ಹೊಗೆ ಕ್ಯಾನ್ ಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಬಂಧಿತ ಆರೋಪಿಗಳೆಲ್ಲರೂ ಸಿಗ್ನಲ್ ಆಪ್ ಮೂಲಕ ಪರಸ್ಪರ ಮಾತುಕತೆ ನಡೆಸುತ್ತಿದ್ದದ್ದು ಪೊಲೀಸರಿಗೆ ದಾಳಿ ಕುರಿತಾಗಿ ಸುಳಿವು ಸಿಗದಿರಲು ಕಾರಣ ಅಂತ ಆರೋಪಿಗಳು ಮಾಹಿತಿ ನೀಡಿದ್ದಾರೆ.
ಇನ್ನು ತಮ್ಮ ಪ್ರಭಾವವನ್ನು ಸಾಬೀತುಪಡಿಸಿಕೊಳ್ಳೋ ಉದ್ದೇಶದಿಂದಲೇ ಸಂಸತ್ ನಲ್ಲಿ ಆರೋಪಿಗಳು ದಾಂಧಲೆ ಎಬ್ಬಿಸಿದ್ದರು ಎನ್ನಲಾಗಿದೆ.