ರೈಲ್ವೆ ನಿಲ್ದಾಣಗಳಿಗೆ ರೈಲುಗಳು ವಿಳಂಬವಾಗಿ ಬರೋದು ಸರ್ವೇ ಸಾಮಾನ್ಯ.. ಒಂದು ಬಾರಿಯೂ ರೈಲಿಗಳು ಸರಿಯಾದ ಟೈಂಗೆ ಬರೋದೇ ಇಲ್ಲ.. ಪ್ರಯಾಣಿಕರಂತೂ ರೈಲುಗಳಿಗೆ ಗಂಟೆಗಟ್ಟಲೆ ಕಾದುಕೂರಬೇಕು.. ಆದ್ರೆ ಇಲ್ಲೊಂದು ರೈಲ್ವೆ ಸ್ಟೇಷನ್ನಲ್ಲಿ ರೈಲು ಬೇಗನೇ ಬಂತು ಅಂತ ಪ್ರಯಾಣಿಕರು ಫುಲ್ ಖುಷ್ ಆಗಿ ಏನ್ ಮಾಡಿದ್ದಾರೆ ನೋಡಿ.
मजामा!
Happy Journey 🚉 pic.twitter.com/ehsBQs65HW— Ashwini Vaishnaw (मोदी का परिवार) (@AshwiniVaishnaw) May 26, 2022
ಇದು ನಡೆದಿರೋದು ಮಧ್ಯಪ್ರದೇಶದ ರತ್ಲಂ ರೈಲ್ವೆ ನಿಲ್ದಾಣದಲ್ಲಿ ಬಾಂದ್ರಾ ಟರ್ಮಿನಸ್ನಿಂದ ಹರಿದ್ವಾರಕ್ಕೆ ಹೋಗಬೇಕಿದ್ದ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ನಿಗದಿತ ಸಮಯಕ್ಕಿಂತಾ 20 ನಿಮಿಷ ಬೇಗವಾಗಿ ಬಂದಿದೆ.. ಹೀಗಾಗಿ ರತ್ಲಂ ರೈಲು ನಿಲ್ದಾಣದಲ್ಲಿ ಹರಿದ್ವಾರ ಎಕ್ಸ್ಪ್ರೆಸ್ ರೈಲಿಗಾಗಿ ಕಾದಿದ್ದ ಸುಮಾರು 90ಕ್ಕೂ ಹೆಚ್ಚು ಪ್ರಯಾಣಿಕರು ಗಾರ್ಬಾ ಡ್ಯಾನ್ಸ್ ಮಾಡಿದ್ದಾರೆ. ಹರಿದ್ವಾರ ಎಕ್ಸ್ಪ್ರೆಸ್ ರೈಲು ಬೇಗನೇ ಬಂದಿದ್ದು ಹೊರಡೋದು ಇನ್ನೂ ತಡ ಎಂದು ಗೊತ್ತಾದ್ದರಿಂದ ಎಲ್ಲ ಪ್ರಯಾಣಿಕರೂ ಫುಲ್ ಖುಷ್ ಆಗಿದ್ದಾರೆ. ಸುಮ್ಮನೇ ರೈಲು ಹತ್ತಿ ಕೂತು ಕಾಲ ಕಳೆಯೋ ಬದಲು ಪ್ಲಾಟ್ಫಾರ್ಮ್ ಮೇಲೆ ಎಲ್ಲರೂ ಜೊತೆಗೂಡಿ ಗುಜರಾತಿ ಸಾಂಪ್ರದಾಯಿಕ ಗಾರ್ಬಾ ಡ್ಯಾನ್ಸ್ ಮಾಡಿದ್ದಾರೆ..
ಇನ್ನು ಪ್ರಯಾಣಿಕರ ಈ ಸಂತಸದ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು. ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವ್ರೂ ಕೂಡ ಪ್ರಯಾಣಿಕರ ಗಾರ್ಬಾ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ್ದು ಅವರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.