ಪಾವಗಡ ಬಳಿಯ ಪಳವಳ್ಳಿ ಕಟ್ಟೆ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬುಡ್ಡಾರೆಡ್ಡಿಹಳ್ಳಿಯ ಮಹೇಂದ್ರಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸರ್ಕಾರ ಎಲ್ಲಾ ರೀತಿಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಆದರೆ, ಇದಕ್ಕೂ ಮುನ್ನ, ಬೆನ್ನುಹುರಿಯ ಶಸ್ತ್ರ ಚಿಕಿತ್ಸೆಗೆ 14ಲಕ್ಷ ರೂಪಾಯಿ ಅಗತ್ಯವಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆದರೆ ತಮ್ಮ ಬಳಿ ಅಷ್ಟು ಹಣ ಇಲ್ಲ ಎಂದು ಮಹೇಂದ್ರ ತಂದೆ ಸೀನಪ್ಪ ಹೇಳಿದ್ದರು.
ಹೀಗಾಗಿ ಗಾಯಾಳು ಮಹೇಂದ್ರ ಚಿಕಿತ್ಸೆಗಾಗಿ ಪಾವಗಡ ಬೀದಿಬದಿ ವ್ಯಾಪಾರಿಗಳು ದೇಣಿಗೆ ಸಂಗ್ರಹ ಮಾಡ ತೊಡಗಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಶಶಿಕಲಾ ಮತ್ತು ಸಾಮಾಜಿಕ ಹೋರಾಟಗಾರ ಅನಿಲ್ ನೇತೃತ್ವದಲ್ಲಿ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಈಗಾಗಲೇ 80ಸಾವಿರ ರೂಪಾಯಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ಇನ್ನಷ್ಟು ಹಣ ಸಂಗ್ರಹ ಮಾಡಿ ಸೀನಪ್ಪನಿಗೆ ತಲುಪಿಸಲು ಶಶಿಕಲಾ ನಿರ್ಧರಿಸಿದ್ದಾರೆ.