ಪ್ರೀತಿಗೂ ವಯಸ್ಸಿಗೂ ಸಂಬಂಧವಿಲ್ಲ. ಸದ್ಯ ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ ಮತ್ತು ಹಿರಿಯ ನಟ ನರೇಶ್ ಶೀಘ್ರ ಮದುವೆ ಆಗಲಿದ್ದಾರೆ. ಇಬ್ಬರು ಲವ್ ನಲ್ಲಿ ಇದ್ದಾರೆ ಎನ್ನುವುದು ಟಾಕ್. ಅಷ್ಟೇ ಅಲ್ಲ ಇಬ್ಬರು ಬಹಳ ದಿನದಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇಬ್ಬರು ನಟನಟಿಯರು ಹತ್ತು ಹಲವು ಸಿನೆಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಪರಿಚಯವೇ ಅವರು ನಿಜ ಜೀವನದಲ್ಲೂ ಒಂದಾಗಲು ಕಾರಣವಾಗುತ್ತಿದೆ. ಇತ್ತೀಚಿಗೆ ಇಬ್ಬರು ಜೊತೆ ಜೊತೆಯಾಗಿ ಮಹಾಬಲೇಶ್ವರ ತೆರಳಿ ಒಬ್ಬ ಸ್ವಾಮೀಜಿಯನ್ನು ಭೇಟಿ ಮಾಡಿ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಹಿರಿಯ ನಟಿ ವಿಜಯನಿರ್ಮಲ ಪುತ್ರನಾದ ನರೇಶ್ ಈಗಾಗಲೇ ಮೂರು ಮದ್ವೆಯಾಗಿದ್ದಾರೆ. ಆದರೆ, ಯಾವೊಂದು ಬಂಧವು ಸುದೀರ್ಘ ಅವಧಿಗೆ ಉಳಿದಿಲ್ಲ. ಸದ್ಯ ಅವರದ್ದು ಏಕಾಂಗಿ ವಿಲಾಸಿ ಜೀವನ. ಈ ವಯಸ್ಸಿನಲ್ಲಿ ಒಬ್ಬಂಟಿ ಜೀವನ ಮಾಡಲು ಇಷ್ಟವಿಲ್ಲದ ನರೇಶ್ ಗೆ ಒಳ್ಳೆ ವ್ಯಕ್ತಿ ತನ್ನ ಜೀವನದಲ್ಲಿ ಬರಲಿ ಎಂಬ ಆಸೆ ಇದೆ. ಆ ವ್ಯಕ್ತಿ ಪವಿತ್ರ ಲೋಕೇಶ್ ಆಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಪವಿತ್ರ ಲೋಕೇಶ್ ವಿಚಾರಕ್ಕೆ ಬಂದರೇ, ಅವರಿಗೆ 2007ರಲ್ಲಿ ನಟ ಸುಚೆಂದ್ರ ಪ್ರಸಾದ್ ಜೊತೆ ಮದುವೆ ಆಗಿತ್ತು. ಆದರೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕಳೆದ ಕೆಲ ದಿನಗಳಿಂದ ಪವಿತ್ರ ಲೋಕೇಶ್ ಒಂಟಿಯಾಗಿ ಜೀವಿಸುತ್ತಿದ್ದಾರೆ. ಆದರೇ, ಈವರೆಗೂ ಅವರು ಕಾನೂನು ಬದ್ಧವಾಗಿ ವಿಚ್ಚೇದನ ಪಡೆದಿಲ್ಲ. ಶೀಘ್ರವೇ ಡೈವೋರ್ಸ್ ಸಿಗುವ ಸಾಧ್ಯತೆ ಇದ್ದು, ಇದು ಮುಗಿದ ಬೆನ್ನಲ್ಲೇ ಪವಿತ್ರ ಲೋಕೇಶ್ ಅಧಿಕೃತವಾಗಿ ನರೇಶ್ ಬಾಳಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಟಾಕ್.
ಗಮನಿಸಬೇಕಾದ ವಿಚಾರ ಅಂದರೆ ಇಬ್ಬರು ಹರಿದಾಡುತ್ತಿರುವ ಸುದ್ದಿಯನ್ನು ಅಲ್ಲಗೆಳೆದಿಲ್ಲ.