ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಪೇಸಿಎಂ ಅಭಿಯಾನದಿಂದ ಪ್ರೇರಿತರಾಗಿರುವ ಮಂಡ್ಯ ಜಿಲ್ಲೆಯ ಪೇಫಾರ್ಮರ್ಸ್ (ರೈತರಿಗೆ ಪಾವತಿಸಿ) ಎಂದು ಅಭಿಯಾನ ಕೈಗೊಂಡಿದ್ದಾರೆ.
ರೈತರಿಗೆ ಕಬ್ಬಿಗೆ ಟನ್ಗೆ 4,500 ರೂಪಾಯಿ ಪಾವತಿಸಿ ಎನ್ನುವ ಪೋಸ್ಟರ್ನ್ನು ರೈತರು ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನೀವು ಯಾರೇ ಅಧಿಕಾರಕ್ಕೆ ಬಂದರೂ ರೈತರು ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೇರಲು ಸರ್ಕಸ್ ಮಾಡುತ್ತಿದ್ದೀರಿ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸ್ತಿದ್ದಾರೆ. ಮೊದಲು ರೈತರು ಬೆಳೆದ ಬೆಳೆಗೆ ನ್ಯಾಯುತ ಬೆಲೆ ಕೊಡಿ. ಪ್ರತಿ ಟನ್ ಖರೀದಿಗೆ 4,500 ರೂಪಾಯಿ ನಿಗದಿ ಮಾಡಿ
ಎಂದು ರೈತರು ಪೇಫಾರ್ಮರ್ ಪೋಸ್ಟರ್ಗಳನ್ನು ಹಂಚಿಕೊಂಡಿದ್ದಾರೆ.
ADVERTISEMENT
ADVERTISEMENT