ಪೇಟಿಎಂ ಮಾದರಿಯಲ್ಲಿ ಪೇಸಿಎಂ (Paycm Poster Protest) ಪೋಸ್ಟರನ್ನು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಅಂಟಿಸಲಾಗಿತ್ತು. ಈ ವಿನೂತನ ಪ್ರತಿಭಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ, ಈ ಪೋಸ್ಟರ್ ಅಂಟಿಸಿದ್ದಾರೆ ಎನ್ನಲಾದ 5 ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ, ಕಾಂಗ್ರೆಸ್ ನಾಯಕರು ಇಂದು ತಾವೂ ಪೇಸಿಎಂ (Paycm Poster Protest) ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ಕಾಂಪೌಂಡ್ ಕಾಂಗ್ರೆಸ್ ನಾಯಕರು ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಬಿಎಂಟಿಸಿ ಬಸ್ ಗಳಿಗೆ ಪೋಸ್ಟರ್ ಅಂಟಿಸುವ ಪ್ರಯತ್ನ ಮಾಡಿದರು. ಆದರೆ, ಸ್ಥಳದಲ್ಲಿಯೇ ಬೀಡುಬಿಟ್ಟಿದ್ದ ಪೊಲೀಸರು ಪ್ರಯತ್ನ ವಿಫಲಗೊಳಿಸಿದರು. ಆದಾಗ್ಯೂ ಬಿಡದ ನಾಯಕರು ರೇಸ್ ಕೋರ್ಸ್ ಕಾಂಪೌಂಡ್ ಗೆ ಪೋಸ್ಟರ್ ಅಂಟಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : ಬಿಜೆಪಿ ಭ್ರಷ್ಟಾಚಾರ: PAYCM ಪೋಸ್ಟರ್ ಸಂಬಂಧ ಮೂವರ ಬಂಧನ
ಆದರೆ, ಸ್ಥಳದಲ್ಲಿಯೇ ಇದ್ದ ಪೊಲೀಸರು. ಕ್ಷಣಾರ್ಧಲ್ಲಿಯೇ ಪೋಸ್ಟರ್ ಗಳನ್ನು ಹರಿದು ಹಾಕಿದರು. ಈ ವೇಳೆ ಶಾಸಕ ರಂಗನಾಥ್ ರನ್ನು ಪೊಲೀಸರು ಶಾಸಕ ಎಂದು ತಿಳಿಯದೇ ಹಿಡಿದು ಎಳೆದಿದ್ದಾರೆ. ಶಾಸಕರು ಪೊಲೀಸರ ಮೇಲೆ ಗರಂ ಆಗಿದ್ದು, ಇವರು ಶಾಸಕ ಎಂದು ತಿಳಿದ ಮೇಲೆ ಪೊಲೀಸರು ಒಂದು ಕ್ಷಣ ತಣ್ಣಗಾದರು.
ಇನ್ನು, ಪೇಸಿಎಂ (Paycm) ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಅಜಯ್ ಸಿಂಗ್, ಎಂಬಿ ಪಾಟೀಲ್, ಸಲೀಂ ಅಹ್ಮದ್, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಹಾಗೂ ಯುವ ನಾಯಕ ನಲಪಾಡ್ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ : Paycm ಪೋಸ್ಟರ್ನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸ್ತೀವಿ – ಡಿಕೆ ಶಿವಕುಮಾರ್