ಬಿಜೆಪಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavraj Bommai) ಸರ್ಕಾರದ ವಿರುದ್ಧ ಪೇಸಿಎಂ (PAYCM) ಹೆಸರಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಸಂಬಂಧ ಬೆಂಗಳೂರಿನ ಪೊಲೀಸರು (Bengaluru Police) ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ (KPCC) ಸಾಮಾಜಿಕ ತಾಲತಾಣದ (Social Media) ಮುಖ್ಯಸ್ಥ ಬಿ ಆರ್ ನಾಯ್ಡು ( B R Naidu), ಪವನ್ ಮತ್ತು ಗಗನ್ ಅವರನ್ನು ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈಗ್ರೌಂಡ್ಸ್ ಠಾಣೆಗೆ (High Ground Police) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D K Shivakumar), ಶಾಸಕ ಅಜಯ್ ಸಿಂಗ್ (MLA Ajay Singh) ಆಗಮಿಸಿದ್ದಾರೆ. ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರ ಜಮಾವಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.
ಡಿಕೆಶಿ ಅವರ ಜೊತೆಗೆ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge), ಮಾಜಿ ಅಡ್ವೋಕೇಟ್ ಜನರಲ್ ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಝ ಮತ್ತು ವಕೀಲ ಸೂರ್ಯ ಮುಕುಂದರಾಜ್ ಕೂಡಾ ಠಾಣೆಗೆ ಆಗಮಿಸಿದ್ದಾರೆ.
ADVERTISEMENT
ADVERTISEMENT